Webdunia - Bharat's app for daily news and videos

Install App

ಸಂಸದ ತೇಜಸ್ವಿ ಸೂರ್ಯ, ಗಾಯಕಿ ಶಿವಶ್ರೀ ಸ್ಕಂದ ಮದುವೆ ಡೇಟ್ ಫಿಕ್ಸ್‌

Sampriya
ಸೋಮವಾರ, 27 ಜನವರಿ 2025 (16:46 IST)
Photo Courtesy X
ಬೆಂಗಳೂರು: ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಬೆನ್ನಲ್ಲೇ  ಭಾವೀ ಪತ್ನಿ ಶಿವಶ್ರೀ ಸ್ಕಂದ ಜತೆ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಕಾಣಿಸಿಕೊಂಡರು. ಇದೀಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು, ಮತ್ತೇ ಸುದ್ದಿಯಲ್ಲಿದ್ದಾರೆ.

ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದು, ಮದುವೆ ದಿನಾಂಕ ಕೂಡಾ ಫಿಕ್ಸ್ ಆಗಿದೆ. ಇದೇ ವರ್ಷದ ಮಾರ್ಚ್ 1 ಮತ್ತು 2 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಪ್ತಪದಿ ತುಳಿಯಲಿರುವ ಈ ಜೋಡಿಯ ಆರತಕ್ಷತೆ ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.  

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಅವರು ಜೊತೆಯಾಗಿ ಕಾಣಿಸಿಕೊಂಡು ಶ್ರೀ ಶ್ರೀ ರವಿಶಂಕರ್ ಅವರ ಆಶೀರ್ವಾದ ಪಡೆದರು. ಶಿವಶ್ರೀ ಅವರು ಹೆಸರಾಂತ ಗಾಯಕಿಯಾಗಿದ್ದಾರೆ. ಇವರ ಗಾಯನವನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.  

ತೇಜಸ್ವಿ ಹಾಗೂ ಶಿವಶ್ರೀ ಅವರು 2021ರಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು.  ಕಾರ್ಯಕ್ರಮದ ಕೊನೆಯಲ್ಲಿ ಶಿವಶ್ರೀಯವರನ್ನು ಸನ್ಮಾನಿಸಿದ್ದರು. ಈ ಫೋಟೋಗಳನ್ನ ಶಿವಶ್ರೀ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments