ತಾಯಿಯ ಅನೈತಿಕ ಸಂಬಂಧ ಬಯಲಾಗಲಿದೆ ಎಂಬ ಆತಂಕಕ್ಕೆ ಆರು ವರ್ಷದ ಮಗಳನ್ನು ಕೊಲೆ ಮಾಡಿರುವ ಘಟನೆ ನವದೆಹಲಿಯ ಗಾಜಿಯಾಪುರ್ ನಲ್ಲಿ ನಡೆದಿದೆ.
 
 			
 
 			
					
			        							
								
																	
	
	29ವರ್ಷದ ಮಹಿಳೆಯ ಜೊತೆ 23 ವರ್ಷದ ಸುಧೀರ್ ಅಕ್ರಮ ಸಂಬಂಧ ಹೊಂದಿದ್ದು, ಪತಿ ಮದ್ಯಪಾನ ಮಾಡಲು ಸಂಜೆ ಹೊತ್ತಲ್ಲಿ ಹೊರಗಡೆ ಹೋದಾಗ ಮನೆಗೆ ಬಂದ ಸುಧೀರ್ ಮಹಿಳೆಯೊಂದಿಗೆ ರತಿಕ್ರೀಡೆ  ನಡೆಸಿದಾಗ ಮಗಳು ನೋಡಿದ್ದಾಳೆ. ಇದನ್ನು ತಂದೆಗೆ ಹೇಳುತ್ತೇನೆ ಎಂದು ಮಗು ಹೇಳಿದ್ದಕ್ಕೆ ಪಕ್ಕದ ಮನೆಯ ಟೆರಸ್ ಮೇಲೆ ಕರೆದುಕೊಂಡು ಹೋಗಿ ಮಗುವನ್ನು ಕೊಲೆಗೈದಿದ್ದಾರೆ.
	
	ಸುಧೀರ್ ಮಗುವಿನ ಕತ್ತು ಸೀಳಿ ಕೊಲೆಗೈದರೆ, ತಾಯಿ ಇದಕ್ಕೆ ಸಹಕಾರ ನೀಡಿ ಪ್ರಿಯಕರನಿಂದ ಕೊಲೆ ಮಾಡಿಸಿದ್ದಾಳೆ. 
	ಮಗಳನ್ನು ಕೊಲೆ ಮಾಡಿಸಿದ ತಾಯಿ, ಏನೂ ಅರಿಯದವಳಂತೆ ನಟಿಸಿದ್ದು, ಸಂಬಂಧಿಕರ ಜೊತೆ ಮಗಳನ್ನು ಹುಡುಕುವ ನಾಟಕವಾಡಿದ್ದಾಳೆ. ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿ ಹುಡುಕಾಟ ಆರಂಭವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಹುಡುಕಿದಾಗ ಕತ್ತು ಸೀಳಿರುವ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ. 
	
	ನೆರೆಹೊರೆಯವರು ಮಹಿಳೆ ಮತ್ತು ಸುಧೀರ್ ನಡುವೆ ಅಕ್ರಮ ಸಂಬಂಧ ಇರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಪ್ರಶ್ನಿಸಿದಾಗ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
	
	ಮಹಿಳೆಯನ್ನು ಹಾಗೂ ಸುಧೀರ್‌ನನ್ನು ಪೊಲೀಸರ ಬಂಧಿಸಿದ್ದಾರೆ. ಮಹಿಳೆಗೆ ಇನ್ನಿಬ್ಬರು ಗಂಡು ಮಕ್ಕಳಿದ್ದಾರೆ.
	 
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.