Select Your Language

Notifications

webdunia
webdunia
webdunia
webdunia

ಆರ್ಥಿಕ ಸಂಕಷ್ಟ; ಮಕ್ಕಳಿಗೆ ಬೆಂಕಿಹಚ್ಚಿದ ತಾಯಿ!

ಆರ್ಥಿಕ ಸಂಕಷ್ಟ; ಮಕ್ಕಳಿಗೆ ಬೆಂಕಿಹಚ್ಚಿದ ತಾಯಿ!
ಸುಪೌಲ್ , ಭಾನುವಾರ, 10 ಏಪ್ರಿಲ್ 2022 (11:21 IST)
ಸುಪೌಲ್: ಆರ್ಥಿಕ ಸಂಕಷ್ಟದ ಹಿನ್ನೆಲೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಲು ಯತ್ನಿಸಿದ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ.

ಸ್ಥಳೀಯ ಗ್ರಾಮಸ್ಥರು ಸಕಾಲದಲ್ಲಿ ಬಂದ ಕಾರಣದಿಂದ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಸುಟ್ಟಗಾಯಗಳಿಂದ ಗಾಯಗೊಂಡ ಇಬ್ಬರು ಮಕ್ಕಳನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಪತಿ ಗುಲಾಬ್ ಸಾಹ್ ಪಂಜಾಬ್ ನ ಲೂಧಿಯಾನದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ರತನ್ ದೇವಿ ಆಲಿಯಾಸ್ ರೂಬಿ ತಮ್ಮ ಇಬ್ಬರು ಮಕ್ಕಳಾದ ಸಂಗೀತಾ ಕುಮಾರಿ ಹಾಗೂ ಶಿವಕುಮಾರ್ ಅವರೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನವಜಾತ ಮಗುವಿನ ಮಾರಾಟ; ತಂದೆ ಸೇರಿದಂತೆ ಆರು ಮಂದಿ ವಶ