Publish Date: Sat, 17 Nov 2018 (09:22 IST)
Updated Date: Sat, 17 Nov 2018 (09:24 IST)
ಮುಂಬೈ: 5 ವರ್ಷದ ಪುಟಾಣಿ ಮಗನಿಗೆ ಇಲಿ ವಿಷ ಪ್ರಾಷನ ಮಾಡಿಸಿದ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಆದರೆ ಆಕೆಯ ದುರಾದೃಷ್ಟಕ್ಕೆ ಮಗು ಸಾವನ್ನಪ್ಪಿದ್ದು, ಆಕೆ ಬದುಕುಳಿದಿದ್ದಾಳೆ. 34 ವರ್ಷದ ರೀನಾ ಆಯೆರಾ ಎಂಬಾಕೆ ಈ ಕೃತ್ಯವೆಸಗಿದ ಮಹಾತಾಯಿ.
ಈಕೆಯ ಪತಿ ಸೆಲ್ ಫೋನ್ ಸರ್ವಿಸ್ ಕೆಲಸ ಮಾಡುತ್ತಿದ್ದು, ಈತ ಮನೆ ಖರ್ಚಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇದೇ ಬೇಸರದಲ್ಲಿ ರಾತ್ರಿ ಮನೆ ಬಿಟ್ಟ ರೀನಾ ಅಂಗಡಿಯೊಂದಕ್ಕೆ ಹೋಗಿ ಇಲಿ ಪ್ರಾಷನ ಖರೀದಿಸಿ ಮೊದಲು ತಾನು ಕುಡಿದು ಬಳಿಕ ಮಗನಿಗೆ ಕೊಟ್ಟಿದ್ದಳು. ಆದರೆ ನಂತರ ತಪ್ಪು ಅರಿತುಕೊಂಡ ಆಕೆ ತಕ್ಷಣವೇ ಮಗನನ್ನು ಪಕ್ಕದ ಆಸ್ಪತ್ರೆಗೆ ಕರೆದೊಯ್ದಿದ್ದಳು. ಆದರೆ ಪುಟಾಣಿ ಮಗು ಸಾವನ್ನಪ್ಪಿದ್ದು, ತಾಯಿ ಬುದಕುಳಿದಿದ್ದಾಳೆ. ಇದೀಗ ಆಕೆಯ ಮೇಲೆ ಪೊಲೀಸರು ಆತ್ಮಹತ್ಯೆ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.