Select Your Language

Notifications

webdunia
webdunia
webdunia
webdunia

ತಾಯಿ-ಮಗಳ ಕೊಲೆ, ಮಗನ ಕೈವಾಡ ಶಂಕೆ

ತಾಯಿ-ಮಗಳ ಕೊಲೆ, ಮಗನ ಕೈವಾಡ ಶಂಕೆ
ನೋಯ್ಡಾ , ಬುಧವಾರ, 6 ಡಿಸೆಂಬರ್ 2017 (12:42 IST)
ದೇಶದ ರಾಜಧಾನಿ ದೆಹಲಿಯ ಸಮೀಪವಿರುವ ಗ್ರೇಟರ್ ನೋಯ್ಡಾದ ಗೌರ್ ನಗರ ಅಪಾರ್ಟ್‍ಮೆಂಟ್‍ನಲ್ಲಿ ತಾಯಿ ಮತ್ತು ಮಗಳ ಬರ್ಬರ ಕೊಲೆ ನಡೆದಿದೆ. ಈ ಕೊಲೆಯಲ್ಲಿ ಮಗನು ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಹರಿತವಾದ ಆಯುಧದಿಂದ ಮೃತರ ಮೇಲೆ ಹಲ್ಲೆ ಮಾಡಲಾಗಿದೆ.ಈ ಘಟನೆ ನಂತರ ಮಹಿಳೆಯ ಮಗ ನಾಪತ್ತೆಯಾಗಿದ್ದಾನೆ.

ಪೊಲೀಸರು ಅಪಾರ್ಟ್‍ಮೆಂಟ್‍ಗೆ ತೆರಳಿದಾಗ ಮನೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಹಂತಕನು ಕೃತ್ಯ ಎಸಗಿ ಶೌಚಾಲಯದ ಕಿಟಕಿ ಮೂಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲದ ಸುಳಿಗೆ ಸಿಕ್ಕಿ ನೇಣಿಗೆ ಕೊರಳೊಡ್ಡಿದ ಚಾಲಕ