Publish Date: Wed, 06 Dec 2017 (09:31 IST)
Updated Date: Wed, 06 Dec 2017 (09:38 IST)
ಬೆಂಗಳೂರು: ಸಾಲಭಾದೆ ತಾಳಲಾರದೇ ಕ್ಯಾಬ್ ಚಾಲಕ ಅನಿಲ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೆನಗಲ್ ನಿವಾಸಿ ಅನಿಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಿನ್ನೆ ರಾತ್ರಿ ಸೆಲ್ಫಿ ವಿಡಿಯೋ ಮಾಡಿ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದರು.
ಅನಿಲ್ ತಂದೆ ರಾಜಣ್ಣ ಅವರು ಎಸ್ ಬಿ ಐ ಬ್ಯಾಂಕ್ ನಲ್ಲಿ ಮನೆ ಅಡವಿಟ್ಟು 5ಲಕ್ಷ ಸಾಲ ಮಾಡಿದ್ದರು. ಏಳು ವರ್ಷದಿಂದ ಸಾಲವನ್ನು ಕಟ್ಟುತ್ತಿದ್ದರು. ಕಳೆದ 3 ಕಂತುಗಳನ್ನು ಕಟ್ಟಲು ಸಾಧ್ಯವಾಗದ ಕಾರಣ ಬ್ಯಾಂಕ್ ಸಿಬ್ಬಂದಿಯವರು ಮನೆಗೆ ಬಂದು ಗಲಾಟೆ ಮಾಡಿದರು.
ಇದರಿಂದ ಮನನೊಂದ ಅನಿಲ್ ಮರ್ಯಾದೆಗೆ ಅಂಜಿ ‘ಯಾವುದೇ ಕಾರಣಕ್ಕೂ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಡಿ ಫ್ರೆಂಡ್ಸ್’ ಎಂದು ಸೆಲ್ಫಿ ವಿಡಿಯೋ ಮಾಡಿ ಅನಿಲ್ ನೇಣಿಗೆ ಶರಣಾದರು. ಚಿನ್ಮಯಿ ಆಸ್ಪತ್ರೆಗೆ ಅನಿಲ್ ಮೃತದೇಹ ರವಾನೆ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ