Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ನಾಲಿಗೆಗೆ ಚಪಲದಿಂದ ಆಗಿ ಹೋಗಿದೆ ಈ ಅವಾಂತರ!

ರಾಹುಲ್ ಗಾಂಧಿ ನಾಲಿಗೆಗೆ ಚಪಲದಿಂದ ಆಗಿ ಹೋಗಿದೆ ಈ ಅವಾಂತರ!
ನವದೆಹಲಿ , ಬುಧವಾರ, 6 ಡಿಸೆಂಬರ್ 2017 (09:13 IST)
ನವದೆಹಲಿ: ಇತ್ತೀಚೆಗೆ ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಆ ರಾಜ್ಯಕ್ಕೆ ಹೆಚ್ಚು ಪ್ರವಾಸ ಮಾಡುತ್ತಿರುವ ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ದಿನೇ ದಿನೇ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರಂತೆ! ಅದಕ್ಕೆ ಕಾರಣವೇನು ಗೊತ್ತಾ?
 

ರಾಹುಲ್ ಸ್ವತಃ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ಇತ್ತೀಚೆಗೆ ನನ್ನ ಮನೆಗೆ ಬಂದ ಸಹೋದರಿ ಪ್ರಿಯಾಂಕಾ ವಾದ್ರಾ ನನ್ನ ಅಡುಗೆ ಮನೆ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಳು. ಅಲ್ಲಿ ಗುಜರಾತ್ ಶೈಲಿಯ ಆಹಾರವೇ ಹೆಚ್ಚಿತ್ತು. ಗುಜರಾತ್ ಶೈಲಿಯ ಆಹಾರ ನನಗೆ ತುಂಬಾ ಇಷ್ಟವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಅದನ್ನೇ ಹೆಚ್ಚು ತಿನ್ನುತ್ತಿದ್ದೇನೆ. ಇದರಿಂದಾಗಿ ನನ್ನ ತೂಕ ಹೆಚ್ಚುತ್ತಿದೆ’ ಎಂದು ರಾಹುಲ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಚುನಾವಣೆ ಪ್ರಚಾರ ನೆಪದಲ್ಲಿ ಗುಜರಾತ್ ನ ಜನಪ್ರಿಯ ಖಾದ್ಯಗಳನ್ನು ರಾಹುಲ್ ಬೇಕಾಬಿಟ್ಟಿಯಾಗಿ ಸವಿಯುತ್ತಿದ್ದಾರೆ. ಇದರಿಂದಾಗಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅವರ ಆಪ್ತರೂ ಹೇಳಿಕೊಂಡಿದ್ದಾರೆ. ನೋಡೀಪ್ಪಾ ಚುನಾವಣೆ ಇಫೆಕ್ಟ್ ದೇಹದ ಮೇಲೂ…!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಮೂರು ತಿಂಗಳು ಕಾಯಿರಿ, ನಾನು ಬಂದು ಎಲ್ಲಾ ಸಮಸ್ಯೆ ಸರಿ ಮಾಡ್ತೀನಿ’