Publish Date: Tue, 05 Dec 2017 (14:30 IST)
Updated Date: Tue, 05 Dec 2017 (14:32 IST)
ಎಐಸಿಸಿ ಭಾವಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಔರಂಗಜೇಬರಿಗೆ ಹೋಲಿಸುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರನ್ನು ಔರಂಗಜೇಬರಿಗೆ ಹೋಲಿಸುವುದು ಸರಿಯಲ್ಲ. ನಾವೇನು ವಂಶಪಾರಂಪರ್ಯ ಅಡಳಿತ ನಡೆಸುತ್ತಿಲ್ಲ ಎಂದರು.
ಅನಂತ ಕುಮಾರ್ ಹೆಗಡೆ ಕೇಂದ್ರ ಮಂತ್ರಿಯಾಗಲು ನಾಲಾಯಕ್. ಕೇಂದ್ರ ಮಂತ್ರಿಯಾದವರು ಅಸಂಸದೀಯ ಭಾಷೆ ಬಳಸಬಾರದು. ನನಗೂ ಕೆಟ್ಟ ಭಾಷೆಯಲ್ಲಿ ಮಾತನಾಡಲು ಬರುತ್ತದೆ. ಆದರೆ, ಅಂತಹ ಭಾಷೆ ರಾಜಕಾರಣಿಗಳು ಬಳಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲಾಠಿಚಾರ್ಜ್ ಆಗುವಂತೆ ಪ್ರತಿಭಟನೆ ಮಾಡಿ ಅಂದರಂತೆ. ಅದಕ್ಕಾಗಿ ಪ್ರತಾಪ್ ಸಿಂಹ ಹಾಗೇ ಮಾಡಿದ್ದಾರಂತೆ. ಶಾಂತಿ ಕದಡುವ ಪ್ರಯತ್ನವನ್ನು ಯಾರು ಮಾಡಬಾರದು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.