Publish Date: Sat, 25 Nov 2017 (08:15 IST)
Updated Date: Sat, 25 Nov 2017 (15:40 IST)
ಕೃಷಿಗಾಗಿ ಸಾಲ ಮಾಡಿಕೊಂಡ ರೈತ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಪುರ ಗ್ರಾಮದಲ್ಲಿ ಜರುಗಿದೆ.
65 ವರ್ಷದ ರೈತ ಲಕ್ಷ್ಮಣಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಲಕ್ಷ ಸಾಲವನ್ನು ಕಟ್ಟಲಾಗದೆ ಬೇಸತ್ತು ಕೃಷಿಗೆ ಬಳಸುವ ಫೀಡನ್ ಕಾಳು ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಕ್ಷೇತ್ರದಲ್ಲಿ ರೈತರು ನಷ್ಟ ಅನುಭವಿಸುತ್ತಿರುವುದರಿಂದ ಸಾಲ ಕಟ್ಟಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ.