Select Your Language

Notifications

webdunia
webdunia
webdunia
webdunia

ಮಾನವ ಮೂತ್ರದ ಬ್ಯಾಂಕ್‌ಗಳ ಸ್ಥಾಪನೆಗೆ ಆದ್ಯತೆ: ನಿತಿನ್ ಗಡ್ಕರಿ

ಮಾನವ ಮೂತ್ರದ ಬ್ಯಾಂಕ್‌ಗಳ ಸ್ಥಾಪನೆಗೆ ಆದ್ಯತೆ: ನಿತಿನ್ ಗಡ್ಕರಿ
ನವದೆಹಲಿ , ಬುಧವಾರ, 15 ನವೆಂಬರ್ 2017 (17:26 IST)
ಮಾನವನ ಮೂತ್ರವನ್ನು ಸಂಗ್ರಹಿಸಿದಲ್ಲಿ ರಸಗೊಬ್ಬರವಾದ ಯೂರಿಯಾ ತಯಾರಿಸಲು ಉಪಯೋಗವಾಗುತ್ತದೆ. ಮೂತ್ರದಿಂದ ತಯಾರಿಸಿದ ಯೂರಿಯ ರಸಗೊಬ್ಬರವನ್ನು ರೈತರಿಗೆ ನೀಡಬಹುದಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
 
ದೇಶಿಯ ಉತ್ಪಾದನೆಯ ಕೊರತೆಯಿಂದಾಗಿ ವಿದೇಶದಿಂದ ಯೂರಿಯ ಅಮುದು ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಮಾನವನ ಮೂತ್ರದಿಂದ ಯೂರಿಯಾ ಸಿದ್ದಪಡಿಸಿದಲ್ಲಿ ಆರ್ಥಿಕವಾಗಿಯೂ ಲಾಭದಾಯಕವಾಗಲಿದೆ. ದೇಶದ ಪ್ರತಿಯೊಂದು ತಹಸೀಲ್ ಕಚೇರಿಯಲ್ಲಿ ಮೂತ್ರ ಬ್ಯಾಂಕ್ ಹೊಂದಿರಬೇಕು ಎಂದು ತಿಳಿಸಿದ್ದಾರೆ.
 
ಸ್ವಿಡನ್ ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಮಾನವನ ಮೂತ್ರದಿಂದ ದೇಶಿಯವಾಗಿ ಯೂರಿಯಾ ಉತ್ಪಾದನೆ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ರೈತರ ಬಳಕೆಗೆ ಬರಲಿದೆ ಎಂದರು. 
 
ಮಾನವನ ಮೂತ್ರದಲ್ಲಿ ನೈಟ್ರೋಜನ್ ಅಧಿಕವಾಗಿರುತ್ತದೆ. ಆದರೆ, ನಾವು ಅದನ್ನು ಬಳಸಿಕೊಳ್ಳದಿರುವುದರಿಂದ ಪ್ರಯೋಜನವಿಲ್ಲದಂತಾಗಿದೆ.  
 
"ಮಾನವ ಮೂತ್ರವು ಬಹಳಷ್ಟು ಸಾರಜನಕವನ್ನು ಹೊಂದಿರುತ್ತದೆ ಆದರೆ ಇದು ವ್ಯರ್ಥವಾಗುತ್ತಿದೆ ತ್ಯಾಜ್ಯವನ್ನು ಸಂಪತ್ತನ್ನಾಗಿ ಪರಿವರ್ತಿಸುವುದು ನನ್ನ ಹವ್ಯಾಸವಾಗಿದೆ, ಈ ಕಲ್ಪನೆಯನ್ನು ಪ್ರಯತ್ನಿಸುವಲ್ಲಿ ಯಾವುದೇ ಹಾನಿ ಇಲ್ಲ ಎಂದು ನಾವು ಭಾವಿಸುತ್ತೇವೆ ನಾವು ಈಗಾಗಲೇ ಸಾರಜನಕ ಮತ್ತು ಪೊಟ್ಯಾಸಿಯಮ್ ಸಾವಯವ ಬದಲಿಗೆ ಬೇರೆ ವ್ಯವಸ್ಥೆ ಹೊಂದಿದ್ದೇವೆ. ಆದಕ್ಕೆ ನೈಟ್ರೋಜನ್ ಸೇರಿಸಿದಲ್ಲಿ ಫಲವತ್ತಾದ ರಸಗೊಬ್ಬರವಾಗಲಿದೆ ಎಂದು ತಿಳಿಸಿದ್ದಾರೆ. 
 
ಗುರಿ ಹೇಗೆ ಸಾಧಿಸಬಹುದೆಂದು ಖಚಿತವಾಗಿಲ್ಲ. ನಾಗ್ಪುರದ ಸಮೀಪವಿರುವ ನಮ್ಮ ಗ್ರಾಮವಾದ ಧಾಪೇವಾಡಾದಲ್ಲಿ ಆರಂಭಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು.
 
ಸರಕಾರ ರೈತರಿಗೆ ಕ್ಯಾನ್‌ಗಳನ್ನು ಒದಗಿಸುತ್ತಿದ್ದು ರೈತರು 10 ಲೀಟರ್ ಪ್ಲ್ಯಾಸ್ಟಿಕ್ ಕ್ಯಾನ್‌ಗಳಲ್ಲಿ ಮೂತ್ರವನ್ನು ಸಂಗ್ರಹಿಸಿ ತಹಶೀಲ್ ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ನೀಡಬೇಕು. ಅದನ್ನು ಸರಕಾರ ರಸಗೊಬ್ಬರ ಉತ್ಪಾದನಾ ಕೇಂದ್ರಗಳಿಗೆ ರವಾನಿಸುತ್ತದೆ ಎಂದು ತಿಳಿಸಿದ್ದಾರೆ. 
 
ರೈತರಿಗೆ ಲೀಟರ್ ಮೂತ್ರಕ್ಕೆ ಒಂದು ರೂಪಾಯಿ ಸಿಗಲಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಮೂತ್ರವು ನಂತರ ಶುದ್ಧೀಕರಣಕ್ಕೆ ಒಳಗಾಗುತ್ತದೆ ಮತ್ತು ಶುದ್ಧ, ಕರಗಬಲ್ಲ ಸಾವಯವ ಗೊಬ್ಬರವನ್ನು ಅದರಿಂದ ಮಾಡಬಹುದಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ಸಿನೆಮಾ ನೋಡುವಾಗ ರೆಡ್ ಹ್ಯಾಂಡ್‌ ಸಿಕ್ಕು ಬಿದ್ದಿದ್ದೆ: ಸಿಎಂ ಮನೋಹರ್ ಪರಿಕ್ಕರ್