Publish Date: Thu, 23 Nov 2017 (09:39 IST)
Updated Date: Thu, 23 Nov 2017 (11:19 IST)
ಬೆಂಗಳೂರಿನಿಂದ ತಮಿಳುನಾಡಿನ ವೆಲ್ಲೂರಿಗೆ ಹೊರಡಲು ಬಸ್ ಹತ್ತಿದ ಮಹಿಳೆಯೊಂದಿಗೆ ತಮಿಳುನಾಡು ಬಸ್ ನಿರ್ವಾಹಕ ಮತ್ತು ಚಾಲಕ ಅನುಚಿತವಾಗಿ ವರ್ತಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಶಾಂತಿನಗರದ ಬಸ್ ನಿಲ್ದಾಣದಿಂದ ವೆಲ್ಲೂರಿಗೆ ಹೊರಡುವ ಬಸನಲ್ಲಿ ಮಹಿಳಾ ವೈದ್ಯರೊಬ್ಬರು ಹತ್ತಿದ್ದರು. ಆದರೆ, ಬಸ್ ಹೊರಡಬೇಕಾದ ವೇಳೆಯಾದರೂ ಬಸ್ ಹೊರಡದ ಕಾರಣ ಮಹಿಳೆ ಬಸ್ ನಿರ್ವಾಹಕರನ್ನು ವಿಚಾರಿಸಿದ್ದಾರೆ. ಪ್ರಯಾಣಿಕರ ಬರುವವರೆಗೆ ಬಸ್ ಹೊರಡುವುದಿಲ್ಲ ಎಂದು ನಿರ್ವಾಹಕ ಹೇಳಿದ್ದಾನೆ.
ಅಲಹಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾಕ್ಟರ್ ಪಟೇಲ್ ಎಂಬ ಮಹಿಳೆ ಎಷ್ಟೇ ಕೇಳಿಕೊಂಡರೂ ಕೂಡ ಬಸ್ ತೆಗೆಯಲು ಚಾಲಕ ಹಿಂದೇಟು ಹಾಕಿದ್ದಾನೆ. ಕನಿಷ್ಟ 10 ಟಿಕೆಟ್ ಗಳು ಮಾರಾಟವಾಗದೆ ಬಸ್ ಹೊರಡುವುದಿಲ್ಲ. ಆದ್ದರಿಂದ ಹತ್ತು ಟಿಕೆಟ್ ಖರೀದಿಸಿದರೆ ಬಸ್ ಬಿಡುವುದಾಗಿ ತಿಳಿಸಿದ್ದಾರೆ. ಆದರೆ, ಪ್ರಯಾಣಿಕರು ಬರದ ಪರಿಣಾಮ ಕೊನೆಗೂ ಮಹಿಳೆ ಬಸ್ಸಿನಲ್ಲೇ ರಾತ್ರಿ ಕಳೆಯುಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.