Select Your Language

Notifications

webdunia
webdunia
webdunia
webdunia

ಹುಡುಗಿ ವಿಚಾರದ ಜಗಳ- ಹಳೆ ಗೆಳೆಯನಿಂದ ಯುವಕನ ಕೊಲೆ

ಹುಡುಗಿ ವಿಚಾರದ ಜಗಳ- ಹಳೆ ಗೆಳೆಯನಿಂದ ಯುವಕನ ಕೊಲೆ
ಬೆಂಗಳೂರು , ಮಂಗಳವಾರ, 5 ಡಿಸೆಂಬರ್ 2017 (08:47 IST)
ಹುಡುಗಿ ವಿಚಾರದಲ್ಲಿ ಹಿಂದೆ ನಡೆದಿದ್ದ ಜಗಳ ಕೊನೆಗೆ ಯುವಕನ ಪ್ರಾಣವನ್ನೇ ಪಡೆದಿದೆ. ಹುಡುಗಿ ವಿಚಾರದಲ್ಲಿ ಹೊಡೆತ ತಿಂದಿದ್ದ ಯುವಕ ಹೊಡೆದವನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.

ಯುವಕ ಹೇಮಂತ ಕೊಲೆಗೀಡಾಗಿದ್ದು, ಹಳೆ ಗೆಳೆಯ ಮಧು ಕೊಲೆ ಮಾಡಿದ್ದಾನೆ. ಹೇಮಂತ ಗೆಳೆಯರ ಜೊತೆ ಪಾರ್ಟಿ ಮಾಡಿ ಮನೆಕಡೆ ಹೊರಟಿದ್ದಾಗ ಎದುರಾದ ಹಳೆ ಗೆಳೆಯ ಮಧು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ.

ಈ ಹಿಂದೆ ಹುಡುಗಿ ವಿಚಾರದಲ್ಲಿ ಹೇಮಂತ ಮಧುನನ್ನು ಹೊಡೆದಿದ್ದ ಎನ್ನಲಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಅವಕಾಶಕ್ಕಾಗಿ ಕಾದು ಒಂಟಿಯಾಗಿ ಸಿಕ್ಕಿದ್ದ ಅವಕಾಶವನ್ನು ಬಳಕೆ ಮಾಡಿಕೊಂಡು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಒಂದು ಘಂಟೆಯೊಳಗೆ ಬಂಧನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಂದಿನಿ ತುಪ್ಪ ತಿನ್ನುವ ಗ್ರಾಹಕರೇ ಹುಷಾರ್