Publish Date: Tue, 07 Jun 2022 (13:58 IST)
Updated Date: Tue, 07 Jun 2022 (14:01 IST)
ಮುಂಬೈ : ಮದುವೆ ಸಮಾರಂಭದಲ್ಲಿ ಊಟ ಮಾಡಿದ ಸುಮಾರು 60ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.
ಪುಸಾದ್ ತಾಲೂಕಿನ ಶೇಂಬಳಪಿಂಪ್ರಿ ಗ್ರಾಮದಲ್ಲಿ ಸೋಮವಾರ ವಿವಾಹ ಕಾರ್ಯಕ್ರಮ ನಡೆಯಿತು. ಈ ವೇಳೆ ಊಟ ಮಾಡಿದ ಬಳಿಕ ಅನೇಕ ಮಂದಿಗೆ ವಾಂತಿ ಮತ್ತು ಸುಸ್ತು ಆರಂಭವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಪ್ರಹ್ಲಾದ್ ಚವ್ಹಾಣ್ ತಿಳಿಸಿದ್ದಾರೆ.
ಇದೀಗ ಸಮೀಪದ ಹಿಂಗೋಲಿ ಜಿಲ್ಲೆಯ ಕಲ್ಮನೂರಿನಲ್ಲಿರುವ ಆಸ್ಪತ್ರೆಯಲ್ಲಿ ಸುಮಾರು 40 ರಿಂದ 45 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪುಸಾದ್ನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 20-25 ಜನರಿಗೆ ವೈದ್ಯಕೀಯ ನೆರವು ನೀಡಲಾಗಿದೆ. ಕೆ