Select Your Language

Notifications

webdunia
webdunia
webdunia
webdunia

ಮದುವೆಯ ಸಂಭ್ರಮದಲ್ಲಿ ನಯನತಾರಾ-ವಿಘ್ನೇಶ್ ಜೋಡಿ: ಸಿಎಂ ಸ್ಟಾಲಿನ್ ಗೆ ಆಹ್ವಾನ

ಮದುವೆಯ ಸಂಭ್ರಮದಲ್ಲಿ ನಯನತಾರಾ-ವಿಘ್ನೇಶ್ ಜೋಡಿ: ಸಿಎಂ ಸ್ಟಾಲಿನ್ ಗೆ ಆಹ್ವಾನ
ಚೆನ್ನೈ , ಸೋಮವಾರ, 6 ಜೂನ್ 2022 (10:20 IST)
ಚೆನ್ನೈ: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿ ಈಗ ಮದುವೆ ತಯಾರಿಯಲ್ಲಿದೆ.

ಇಬ್ಬರೂ ಜೂನ್ 9 ರಂದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಯಿದೆ. ಈ ಹಿನ್ನಲೆಯಲ್ಲಿ ನಯನತಾರಾ ಮತ್ತು ವಿಘ್ನೇಶ್ ಜೋಡಿ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಭೇಟಿಯಾಗಿ ಮದುವೆಗೆ ಆಹ್ವಾನವನ್ನೂ ನೀಡಿದೆ.

ಇನ್ನು, ನಯನತಾರಾ-ವಿಘ್ನೇಶ್ ಮದುವೆಯನ್ನು ಅಭಿಮಾನಿಗಳೂ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗಾಗಿ ಇದರ ಲಾಭ ಪಡೆದುಕೊಳ್ಳಲು ಒಟಿಟಿ ಸಂಸ್ಥೆಗಳಿಂದ ನೇರಪ್ರಸಾರದ ಹಕ್ಕಿಗಾಗಿ ಭಾರೀ ಬೇಡಿಕೆ ಬಂದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ಪಾಲಿಗೆ ಇಂದು ಸ್ಪೆಷಲ್ ಬರ್ತ್ ಡೇ