Select Your Language

Notifications

webdunia
webdunia
webdunia
webdunia

ಗಾಯಗೊಂಡ ಮರಿಯನ್ನು ಆಸ್ಪತ್ರೆಗೆ ಕರೆತಂದ ತಾಯಿ ಕೋತಿ! ವೀಡಿಯೊ ವೈರಲ್!‌

ಗಾಯಗೊಂಡ ಮರಿಯನ್ನು ಆಸ್ಪತ್ರೆಗೆ ಕರೆತಂದ ತಾಯಿ ಕೋತಿ! ವೀಡಿಯೊ ವೈರಲ್!‌
bengaluru , ಶುಕ್ರವಾರ, 10 ಜೂನ್ 2022 (14:28 IST)
ಚಿಕಿತ್ಸೆ ಕೊಡಿಸಲು ಗಾಯಗೊಂಡ ತನ್ನ ಮರಿಯನ್ನು ಕೋತಿಯೊಂದು ಆಸ್ಪತ್ರೆ ಕ್ಲಿನಿಕ್‌ ಕರೆ ಕರೆದುಕೊಂಡು ಬಂದ ಹೃದಯಸ್ಪರ್ಶಿ ಘಟನೆ ಬಿಹಾರದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
ಸಾಮಾನ್ಯವಾಗಿ ಕಾಯಿಲೆ ಬಿದ್ದರೆ ಅಥವಾ ಗಾಯಗೊಂಡರೇ ಮನುಷ್ಯರು ಮಾತ್ರ ಆಸ್ಪತ್ರೆ ಬಾಗಿಲು ತಟ್ಟುತ್ತಾರೆ. ಕೆಲವರು ಭಯದಿಂದಲೋ ಇನ್ನಾವುದೋ ಕಾರಣಕ್ಕೋ ಆಸ್ಪತ್ರೆಗೆ ಹೋಗಲು ಹಿಂಜರಿಯತ್ತಾರೆ. ಆದರೆ ಇದೇ ಮೊದಲ ಬಾರಿ ಕೋತಿಯೊಂದು ಆಸ್ಪತ್ರೆಗೆ ತನ್ನ ಮರಿಯನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದೆ.
ಬಿಹಾರದ ಸಸರಮ್‌ ಶಹಜಾಮ ಎಂಬಲ್ಲಿ ಈ ಘಟನೆ ನಡೆದಿದ್ದು, ಡಾ.ಎಸ್.ಎಂ. ಅಹ್ಮದ್‌ ಅವರ ಕ್ಲಿನಿಕ್‌ ಗೆ ಮರಿಯನ್ನು ಕರೆದುಕೊಂಡು ಬಂದ ತಾಯಿ ಕೋತಿ ನೋಡಿ ಅಲ್ಲಿಯ ಜನರು ಮೂಕಸ್ಮಿತರಾಗಿದ್ದಾರೆ. ಅಲ್ಲದೇ ವೈದ್ಯ ಕೋತಿ ಮರಿಗೆ ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಮಕ್ಕಳು ಕೋತಿಗೆ ಕಲ್ಲು ತೂರುತ್ತಿದ್ದರು. ಅವರಿಗೆ ಬೈಯ್ದು ಕಳುಹಿಸಿ ನೋಡಿದಾಗ ಅದು ಮರಿ ಆಗಿತ್ತು. ಅಷ್ಟರಲ್ಲಿ ತಾಯಿ ಮರಿ ಬಂದು ಮರಿಯನ್ನು ಹಿಡಿದುಕೊಂಡು ಹೋಯಿತು. ಸ್ವಲ್ಪ ಹೊತ್ತಿನ ನಂತರ ಅದು ಕ್ಲಿನಿಕ್‌ ಗೆ ಬಂದಿತು. ಅದಕ್ಕೆ ಚಿಕಿತ್ಸೆ ನೀಡಿದೆ. ಸ್ವಲ್ಪ ಹೊತ್ತು ಕ್ಲಿನಿಕ್‌ ನಲ್ಲಿ ಇದ್ದ ಕೋತಿ ನಂತರ ಹೊರಗೆ ಹೋಯಿತು ಎಂದು ವೈದ್ಯ ಅಹ್ಮದ್‌ ವಿವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆ ಸಿಬ್ಬಂದಿಗೆ ಲಂಚ ಕೊಟ್ಟು ಮಗನ ಶವ ಪಡೆಯಲು ಭಿಕ್ಷೆ ಬೇಡಿದ ದಂಪತಿ!