Publish Date: Fri, 10 Jun 2022 (10:02 IST)
Updated Date: Fri, 10 Jun 2022 (11:07 IST)
ಮುಂಬೈ : ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ನಿರಂತರ ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ರೂಪಾಯಿಯ ಮೌಲ್ಯ ಗುರುವಾರ ಅಮೆರಿಕನ್ ಡಾಲರ್ ಎದುರು 77.81ರಷ್ಟಕ್ಕೆ ಕುಸಿತವಾಗಿದೆ.
ಬುಧವಾರ ರೂಪಾಯಿ ಮೌಲ್ಯ 77.68ರಷ್ಟು ಇದ್ದು, ದಿನದ ಅಂತರದ (ಇಂಟ್ರಾ ಡೇ) ದಾಖಲೆಯ ಕನಿಷ್ಠ ಮಟ್ಟ 13 ಪೈಸೆಯಷ್ಟು ಕುಸಿದಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 77.81ಕ್ಕೆ ತಲುಪಿದೆ.
ಮೇ 4 ರಂದು ನಡೆದ ನಿಗದಿತ ಸಭೆಯಲ್ಲಿ ಆರ್ಬಿಐ 40 ಬಿಪಿಎಸ್ ಹೆಚ್ಚಿಸಿದ್ದು, ಇದು ದರದ ಏರಿಕೆಗೆ ಕಾರಣವಾಗಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್ಗೆ 123.43 ಡಾಲರ್ ಇದ್ದು, 0.12 ರಷ್ಟು ಕುಸಿದಿದೆ.