Select Your Language

Notifications

webdunia
webdunia
webdunia
Sunday, 6 April 2025
webdunia

ಮನೆ ಮಗಳ ಮೇಲೆ ಅತ್ಯಾಚಾರ ನಡೆಸಿದ ಸಿಟ್ಟಿಗೆ ಕಾಮುಕರಿಗೆ ಬೆಂಕಿ ಹಚ್ಚಿದ ಕುಟುಂಬಸ್ಥರು!

ಅತ್ಯಾಚಾರ
ರಾಂಚಿ , ಶುಕ್ರವಾರ, 10 ಜೂನ್ 2022 (11:08 IST)
ರಾಂಚಿ: ತಮ್ಮ ಮನೆ ಮಗಳ ಮೇಲೆ ಅತ್ಯಾಚಾರ ನಡೆಸಿದ ಇಬ್ಬರು ಕಾಮುಕರನ್ನು ಸಂತ್ರಸ್ತೆಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಸಂತ್ರಸ್ತ ಅಪ್ರಾಪ್ತ ಬಾಲಕಿ ತನ್ನ ತಂದೆಯೊಂದಿಗೆ ಮದುವೆಯೊಂದಕ್ಕೆ ಹೋಗಿ ವಾಪಸ್ ಬರುತ್ತಿದ್ದಳು. ಬಸ್ ನಿಲ್ದಾಣದಲ್ಲಿ ಎಷ್ಟು ಕಾದರೂ ಬಸ್ ಬರದೇ ಇದ್ದಾಗ ಅದೇ ದಾರಿಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಆರೋಪಿಗಳ ಬಳಿ ಮಗಳನ್ನು ಊರಿಗೆ ಡ್ರಾಪ್ ಮಾಡಲು ತಂದೆ ವಿನಂತಿಸಿದ್ದರು. ಇಬ್ಬರೂ ತಮ್ಮದೇ ಗ್ರಾಮದವರೆಂಬ ಕಾರಣಕ್ಕೆ ತಂದೆ ಮಗಳನ್ನು ಅವರ ಜೊತೆ ಕಳುಹಿಸಿದ್ದರು.

ಆದರೆ ಮನೆಗೆ ಬಿಡುವ ಮೊದಲು ದಾರಿಯಲ್ಲಿಯೇ ಇಬ್ಬರೂ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಇಬ್ಬರೂ ಆರೋಪಿಗಳನ್ನು ಮನಬಂದಂತೆ ಥಳಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನೋರ್ವ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೆಯವನ ಜೊತೆ ಓಡಿ ಹೋದ ಮಹಿಳೆಗಾಗಿ ಪೊಲೀಸರ ಮೊರೆ ಹೋದ ಇಬ್ಬರು ಗಂಡಂದಿರು!