Publish Date: Fri, 10 Jun 2022 (14:25 IST)
Updated Date: Fri, 10 Jun 2022 (14:27 IST)
ಮಗನ ಶವ ಪಡೆಯಲು ಆಸ್ಪತ್ರೆಯ ಸಿಬ್ಬಂದಿಗೆ 50 ಸಾವಿರ ಲಂಚ ನೀಡಲು ಹೆತ್ತವರು ಭಿಕ್ಷೆ ಬೇಡಿದ ಆಘಾತಕಾರಿ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಸರಕಾರಿ ಆಸ್ಪತ್ರೆಯ ಮರಣೋತ್ತರ ವಿಭಾಗದ ಸಿಬ್ಬಂದಿ 50 ಸಾವಿರ ರೂ. ಲಂಚ ನೀಡಿದರೆ ವರದಿ ನೀಡುವುದಾಗಿ ಹೇಳಿದ್ದಾರೆ. ಮರಣೋತ್ತರ ವರದಿ ನೀಡದೇ ಶವ ನೀಡುವುದಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಹಣ ಕೇಳಬಹುದು. ಆದರೆ ಒತ್ತಡ ಹೇರುವಂತಿಲ್ಲ. ಈ ರೀತಿ ಹಣಕ್ಕಾಗಿ ಪೀಡಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಮಸ್ತಿಪುರ್ ಸಿವಿಲ್ ಸರ್ಜನ್ ತಿಳಿಸಿದ್ದಾರೆ.
ಮಗನ ಶವ ಪಡೆಯಲು ಹೆತ್ತವರು ಭಿಕ್ಷೆ ಬೇಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸರಕಾರಿ ಆಸ್ಪತ್ರೆ ಕೂಡಲೇ ಶವವನ್ನು ವಾಚ್ ಮನ್ ಮೂಲಕ ಕುಟುಂಬದವರಿಗೆ ತಲುಪಿಸಿದ್ದಾರೆ.