Publish Date: Sun, 12 Jun 2022 (08:50 IST)
Updated Date: Sun, 12 Jun 2022 (08:57 IST)
ಜೈಪುರ: 12 ವರ್ಷದ ಅಪ್ರಾಪ್ತ ಬಾಲಕನನ್ನು ಫ್ಯಾನ್ ಗೆ ತಲೆಕೆಳಗಾಗಿ ನೇತು ಹಾಕಿ, ಬರೆ ಹಾಕಿ ಮನೆ ಮಾಲಿಕರು ಶಿಕ್ಷೆ ನೀಡಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.
ಬಾಲಕ ಆರೋಪಿಗಳ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ. ಹೊರಗೆ ಆಟವಾಡುತ್ತಿದ್ದ ಬಾಲಕ ತಮ್ಮ ಮಗಳನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿದ ಮನೆ ಮಾಲಿಕರು ಆತನನ್ನು ಮನೆಯೊಳಗೆ ಕರೆತಂದು ಫ್ಯಾನ್ ಗೆ ತಲೆಕೆಳಗಾಗಿ ನೇತು ಹಾಕಿ ದಂಡಿಸಿದ್ದಾರೆ. ಅಲ್ಲದೆ ಘಟನೆಯನ್ನು ವಿಡಿಯೋ ಕೂಡಾ ಮಾಡಿದ್ದಾರೆ.
ಬಳಿಕ ಬಾಲಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಆರೋಪಿಗಳು ತಮ್ಮ ಮಗಳ ಮೇಲೆ ಚುಡಾಯಿಸಿದ್ದರ ಕುರಿತು ಪೊಲೀಸರಿಗೆ ದೂರು ನೀಡಿಲ್ಲ. ಇದೀಗ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಾಲಿಕರ ಮೇಲೆ ಪ್ರಕರಣ ದಾಖಲಾಗಿದೆ.