Publish Date: Sat, 11 Jun 2022 (08:50 IST)
Updated Date: Sat, 11 Jun 2022 (08:51 IST)
ನವದೆಹಲಿ: ಕೊರೋನಾ, ಲಾಕ್ ಡೌನ್ ವೇಳೆ ಅನೇಕರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದರು. ಕೆಲವರು ಮತ್ತೆ ಹೊಸ ಬದುಕು ಕಟ್ಟಿಕೊಂಡರೆ ಮತ್ತೆ ಕೆಲವರು ಅಡ್ಡದಾರಿ ಹಿಡಿದ ಉದಾಹರಣೆಗಳೂ ಇವೆ.
ಇದೇ ರೀತಿ ಕೊವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಹೊಟ್ಟೆಪಾಡಿಗೆ ಕಳ್ಳತನದ ಹಾದಿಗಿಳಿದ ದೆಹಲಿಯ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಲಾಮ್ ಎಂಬಾತ ಎಲೆಕ್ಟ್ರಿಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೊವಿಡ್ ಸಂದರ್ಭದಲ್ಲಿ ಇದ್ದ ಕೆಲಸವೂ ಇಲ್ಲದೇ ಸಂಕಷ್ಟ ಎದುರಾಯಿತು. ಬಳಿಕ ಆತ ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡುವ ದಂಧೆಗಿಳಿದ. ಇದೇ ರೀತಿ ಮಹಿಳೆಯೊಬ್ಬರ ಫೋನ್ ಕದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.