Publish Date: Sun, 13 Sep 2020 (20:07 IST)
Updated Date: Sun, 13 Sep 2020 (20:08 IST)
ಪ್ರೇಯಸಿ ತನಗೆ ಕಾಲ್ ಮಾಡುತ್ತಿಲ್ಲ, ಮೆಸೆಜ್ ಮಾಡುತ್ತಿಲ್ಲ ಎಂದು ನೊಂದ ಪಾಗಲ್ ಪ್ರೇಮಿಯೊಬ್ಬ ಮಾಡಬಾರದ್ದನ್ನು ಮಾಡಿಕೊಂಡಿದ್ದಾನೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ದುರೈ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು.
ಲಾಕ್ ಡೌನ್ ಜಾರಿಯಾದ ಬಳಿಕ ಪರಸ್ಪರ ಭೇಟಿಯಾಗಿಲ್ಲ. ಅಲ್ಲದೇ ಲಾಕ್ ಡೌನ್ ತೆರವುಗೊಂಡ ನಂತರವೂ ಮೆಸೆಜ್, ಕಾಲ್ ಮಾಡದೇ ಪ್ರೇಯಸಿ ನಿರ್ಲಕ್ಷ್ಯ ಮಾಡುತ್ತಿದ್ದಳು ಎನ್ನಲಾಗಿದೆ.
ಪ್ರೇಯಸಿಯ ನಡೆಯಿಂದ ಬೇಸತ್ತ ಪಾಗಲ್ ಪ್ರೇಮಿ ದುರೈ ಕಟ್ಟಡವೊಂದರ ಮೇಲಿನಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಚೆನ್ನೈನಲ್ಲಿ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿರುವ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ.