Publish Date: Thu, 01 Apr 2021 (07:17 IST)
Updated Date: Thu, 01 Apr 2021 (07:19 IST)
ಲಕ್ನೋ : ವಕೀಲನೊಬ್ಬನನ್ನು ಸಹೋದರರಿಬ್ಬರು ಕೊಲೆ ಮಾಡಿ ಶವವನ್ನು ರಸ್ತೆ ಬದಿಯಲ್ಲಿ ಎಸೆದ ಘಟನೆ ಉನ್ನಾವೊ ಮೊರಾವನ್ ಪ್ರದೇಶದಲ್ಲಿ ನಡೆದಿದೆ.
ವಕೀಲ ಸಹೋದರರಿಬ್ಬರಿಗೆ ಪುರುಷತ್ವ ಇಲ್ಲದವರು ಎಂದು ನಿಂದಿಸುತ್ತಿದ್ದ. ಇದರಿಂದ ಕೋಪಗೊಂಡ ಸಹೋದರರು ವಕೀಲನನ್ನು ತಮ್ಮ ವಸತಿ ಗೃಹಕ್ಕೆ ಕರೆದು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಇತ್ತ ವಕೀಲನ ಸಹೋದರ ವಕೀಲ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾಗ ವಕೀಲನ ಶವ ರಸ್ತೆಯ ಬದಿಯಲ್ಲಿ ಸಿಕ್ಕಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯ ವೇಳೆ ಹಲವರನ್ನು ವಿಚಾರಣೆ ನಡೆಸಿದ್ದಾರೆ. ಆ ವೇಳೆ ಆರೋಪಿ ಸಹೋದರರಿಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ, ಪೊಲೀಸರು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.