Select Your Language

Notifications

webdunia
webdunia
webdunia
webdunia

ವಕೀಲ್ ಸಾಬ್ ಚಿತ್ರದ ಟಿಕೆಟ್ ಬೆಲೆ ಎಷ್ಟು ಗೊತ್ತಾ?

ವಕೀಲ್ ಸಾಬ್ ಚಿತ್ರದ ಟಿಕೆಟ್ ಬೆಲೆ ಎಷ್ಟು ಗೊತ್ತಾ?
ಹೈದರಾಬಾದ್ , ಸೋಮವಾರ, 29 ಮಾರ್ಚ್ 2021 (12:03 IST)
ಹೈದರಾಬಾದ್ : ಪವನ್ ಕಲ್ಯಾಣ್ ಮತ್ತು ಶ್ರುತಿ ಹಾಸನ್ ಅಭಿನಯದ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಈ ನಡುವೆ ಚಿತ್ರದ ವಿತರಕರು  ಟಿಕೆಟ್ ದರ ಏರಿಕೆಯೊಂದಿಗೆ  ರಾತ್ರಿ ಪ್ರದರ್ಶನಗಳಿಗೆ ವಿಶೇಷ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಟಿಕೆಟ್ ಬೆಲೆಯನ್ನು 1500ರೂ.ಗೆ ನಿಗದಿಪಡಿಸಿದ್ದಾರೆ. ಕೆಲವು ವಿತರಕರು ಚಿತ್ರದ ಟಿಕೆಟ್ ಗಳನ್ನು 300ರಿಂದ 500ರೂ.ಗೆ ಮಾರಾಟ ಮಾಡಲು ಯೋಜಿಸುತ್ತಿದ್ದಾರೆ. ಹಾಗೆ ಆಂಧ್ರಪ್ರದೇಶದಲ್ಲಿ ಚಿತ್ರ ಪ್ರದರ್ಶನ ಬೆಳಿಗ್ಗೆ 1 ಗಂಟೆಗೆ ಪ್ರಾರಂಭವಾಗಿದ್ದರೆ, ತೆಲಂಗಾಣದಲ್ಲಿ ಪ್ರದರ್ಶನ ಬೆಳಿಗ್ಗೆ 6 ಗಂಟೆಗೆ  ಪ್ರಾರಂಭವಾಗಲಿದೆ ಎನ್ನಲಾಗಿದೆ.

ಹಾಗೇ ಈ ಚಿತ್ರದ ಟ್ರೈಲರ್ ಇಂದು ಸಂಜೆ 5.30ಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಮತ್ತು ಯೂಟ್ಯೂಬ್ ನಲ್ಲಿ ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ನೆಚ್ಚಿನ ಕಾರನ್ನು ಖರೀದಿಸಿದ ನಟ ಪ್ರಭಾಸ್