Publish Date: Sun, 28 Mar 2021 (13:03 IST)
Updated Date: Sun, 28 Mar 2021 (13:09 IST)
ಹೈದರಾಬಾದ್ : ಟಾಲಿವುಡ್ ನಟಿ ದಿಯಾ ಮಿರ್ಜಾ ಅವರು ಮುಂಬರುವ ಥ್ರಿಲ್ಲರ್ ಚಿತ್ರ ವೈಲ್ಡ್ ಡಾಗ್ ನಲ್ಲಿ ನಾಗಾರ್ಜುನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟಿ ಪರಿಸರ ಮಾಲಿನ್ಯದ ಬಗ್ಗೆ ಮಾತನಾಡಲು ಹೋಗಿ ಮುಜುಗರಕ್ಕೀಡಾಗಿದ್ದಾರೆ.
ಸದ್ಯ ಮಾಲ್ಡೀವ್ಸ್ ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದ ನಟಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪರಿಸರ ಮಾಲಿನ್ಯದಿಂದಾಗುವ ನಷ್ಟದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆ ವೇಳೆ ಅವರು ಪುರುಷರ ಖಾಸಗಿ ಭಾಗದ ಬಗ್ಗೆ ಮಾತನಾಡಿದ್ದಾರೆ.
“ಪರಿಸರದಲ್ಲಿ ಇರುವ ವಿಷಕಾರಿ ರಾಸಾಯನಿಕವು ವೀರ್ಯಾಣುಗಳ ಸಂಖ್ಯೆ ಮತ್ತು ವೃಷಣಗಳ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಇದು ಪುರುಷರ ಖಾಸಗಿ ಭಾಗದ ಮೇಲೆ ಪರಿಣಾಮ ಬೀರುತ್ತದೆ” ಎಂದು ನಟಿ ದಿಯಾ ಮಿರ್ಜಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ.