Select Your Language

Notifications

webdunia
webdunia
webdunia
webdunia

‘ವೇದಂ’ ಚಿತ್ರದಲ್ಲಿ ನಟಿಸಿದ ನಟ ನಾಗಯ್ಯ ನಿಧನ

‘ವೇದಂ’ ಚಿತ್ರದಲ್ಲಿ ನಟಿಸಿದ ನಟ ನಾಗಯ್ಯ ನಿಧನ
ಹೈದರಾಬಾದ್ , ಸೋಮವಾರ, 29 ಮಾರ್ಚ್ 2021 (09:56 IST)
ಹೈದರಾಬಾದ್ : ಕ್ರಿಶ್ ಅವರ  ‘ವೇದಂ’ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಚಿರಪರಿಚಿತರಾದ ಟಾಲಿವುಡ್ ನ ಕ್ಯಾರೆಕ್ಟರ್ ಆರ್ಟಿಸ್ಟ್ ನಾಗಯ್ಯ ಶನಿವಾರ ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಾಗಯ್ಯ ಗುಂಟೂರು ದೇಸವರಂ ಪೇಟ ಮೂಲದವರಾಗಿದ್ದಾರೆ. ಅವರಿಗೆ 77ವರ್ಷ ವಯಸ್ಸಾಗಿದ್ದು,  ಅವರು ಅನಾರೋಗ್ಯದಿಂಧ ಬಳಲುತ್ತಿದ್ದರು ಎನ್ನಲಾಗಿದೆ. ಶನಿವಾರದಂದು ಅವರು ಕೊನೆಯುಸಿರೆಳೆದಿದ್ದಾರೆ.

ಅವರು ವೇದಂ ಚಿತ್ರದಲ್ಲಿ ಉತ್ತಮವಾಗಿ ನಟಿಸಿ ಜನಪ್ರಿಯರಾಗಿದ್ದಾರೆ. ಬಳಿಕ ಅವರು ‘ಸೀಮಾ ತಪಕೈ’, ‘ಗಮನಮ್’, ‘ಬಾಲುಪು’, ‘ನಾಗವಲ್ಲಿ’, ‘ಸ್ಪೈಡರ್’, ರಾಮಯ್ಯ ವಾಸ್ತವಾಯ’, ಸೇರಿದಂತೆ 30ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಇವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರರಂಗದಲ್ಲಿ 18 ವರ್ಷ ಪೂರೈಸಿದ ನಟ ಅಲ್ಲು ಅರ್ಜುನ್