Publish Date: Sat, 14 Nov 2020 (09:05 IST)
Updated Date: Sat, 14 Nov 2020 (09:06 IST)
ಅಹಮದಾಬಾದ್ : ಹದಿಹರೆಯದ ಯುವಕನಿಂದ ಲೈಂಗಿಕ ದೌರ್ಜನ್ಯಕೊಳ್ಳಗಾದ 13ವರ್ಷದ ಹುಡುಗಿಗೆ ಗರ್ಭಪಾತ ಮಾಡಿಸಿದ ಘಟನೆ ಗುಜರಾತ್ ನ ಜಮ್ನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ.
ಸಂತ್ರಸ್ತೆಯ ತಂದೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಗ್ರಾಮದ ಹೊರವಲಯದಲ್ಲಿರುವ ಕೃಷಿ ಮೈದಾನದಲ್ಲಿ ಯುವಕ ಹುಡುಗಿಯ ಮೇಲೆ ಮೂರು ಬಾರಿ ಮಾನಭಂಗ ಎಸಗಿದ್ದಾನೆ ಎನ್ನಲಾಗಿದೆ.
ಇದರಿಂದ ಹುಡುಗಿ ಗರ್ಭಧರಿಸಿದ್ದು, ಆಕೆಗೆ ಗರ್ಭಪಾತ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.