Publish Date: Sun, 08 Nov 2020 (09:55 IST)
Updated Date: Sun, 08 Nov 2020 (09:56 IST)
ಅಹಮದಾಬಾದ್ : ಜನನನಾಂಗದ ಸೋಂಕಿಗೆ ತುತ್ತಾದ ಮಹಿಳೆಗೆ ಪತಿಗೆ ಟ್ರಿಪಲ್ ತಲಾಖ್ ನೀಡಿದ್ದರಿಂದ ಹಿನ್ನಲೆಯಲ್ಲಿ ಮಹಿಳೆ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ.
ಶಬಾನಾ ಸೈಯದ್ (24) ಇತ್ತೀಚೆಗೆ ವಿವಾಹವಾಗಿದ್ದು, ಆದರೆ ಪತಿಯ ಆಕೆಯ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಬಳಿಕ ಗರ್ಭಿಣಿಯಾದ ಮಹಿಳೆ ಖಾಸಗಿ ಭಾಗದ ಸ್ವಚ್ಚತೆ ಮಾಡಿಕೊಳ್ಳದ ಕಾರಣ ಜನನಾಂಗದ ಸೋಂಕಿಗೆ ತುತ್ತಾಗಿದ್ದಾಳೆ. ಆಗ ಪತಿಯು ಬೇರೆ ವಿವಾಹವಾಗುವುದಾಗಿ ತಿಳಿಸಿ ಆಕೆಯ ಕುಟುಂಬದವರ ಮುಂದೆ ಟ್ರಿಪಲ್ ತಲಾಖ್ ನೀಡಿದ್ದಾನೆ.
ತಲಾಖ್ ನೀಡುವುದು ಕಾನೂನಿನ ಪ್ರಕಾರ ಅಪರಾಧ ಎನ್ನಲಾದ ಹಿನ್ನಲೆಯಲ್ಲಿ ಈ ಬಗ್ಗೆ ಮಹಿಳೆ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.