Publish Date: Sun, 08 Nov 2020 (09:53 IST)
Updated Date: Sun, 08 Nov 2020 (09:54 IST)
ಮುಂಬೈ : 30 ವರ್ಷದ ಕಾರ್ಮಿಕ ಯುವಕನೊಬ್ಬ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಹೆಣ್ಣು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನ ಮುಲುಂಡ್ ನಲ್ಲಿ ನಡೆದಿದೆ.
ಆರೋಪಿ ನಾಯಿಯನ್ನು ಎಳೆದುಕೊಂಡು ಹೋಗಿ ಪಾರ್ಕಿಂಗ್ ಏರಿಯಾದಲ್ಲಿನ ಸಣ್ಣ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿ ನಾಯಿಯ ಬಾಯಿಯನ್ನು ಹಗ್ಗದಿಂದ ಕಟ್ಟಿ ಲೈಂಗಿಕ ಕಿರುಕುಳ ನೀಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸೆಕ್ಯುರಿಟಿ ಗಾರ್ಡ್ ನಾಯಿಯ ಸಣ್ಣ ಧ್ವನಿಯ ಕೂಗಾಟ ಕೇಳಿ ಕೋಣೆಗೆ ಹೋದಾಗ ನಾಯಿಯ ಜನನಾಂಗದಲ್ಲಿ ರಕ್ತಸ್ರಾವವಾಗುವುದು ಕಂಡುಬಂದಿದೆ. ತಕ್ಷಣ ವಿಷಯ ಅರಿತುಕೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಆರೋಪಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.