Publish Date: Sun, 08 Nov 2020 (09:24 IST)
Updated Date: Sun, 08 Nov 2020 (09:26 IST)
ಬೆಂಗಳೂರು: ಅಮೆರಿಕಾ ಅಧ‍್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತಿದ್ದರ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಫ್ಯಾಸಿಸ್ಟ್ ಶಕ್ತಿಗಳಿಗೆ ಸೋಲಾಗಿದೆ ಎಂದಿರುವ ರಮ್ಯಾ ಈಗ ಟ್ರಂಪ್, 2024 ರಲ್ಲಿ ಇನ್ನೊಬ್ಬರು ತೊಲಗಬೇಕಿದೆ ಎಂದು ಪ್ರಧಾನಿ ಮೋದಿಯನ್ನುದ್ದೇಶಿಸಿ ಟಾಂಗ್ ಕೊಟ್ಟಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳಿಗೆ, ವಿಭಜಿಸಿ ಆಳುವವರಿಗೆ ನೆಲೆಯಿಲ್ಲ ಎನ್ನುವುದು ಈ ಚುನಾವಣೆಯಿಂದ ಸಾಬೀತಾಗಿದೆ ಎಂದು ಅವರು ಟೀಕಿಸಿದ್ದಾರೆ.