Publish Date: Tue, 20 Oct 2020 (10:08 IST)
Updated Date: Tue, 20 Oct 2020 (10:09 IST)
ವಿಜಯಪುರ : ಉತ್ತರ ಕರ್ನಾಟಕದಲ್ಲಿ ಒಬ್ಬರನ್ನಾದರೂ ಜನ ಗೆಲ್ಲಿಸುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳಿದ ಭಾಗದಲ್ಲಿ ಬಿಜೆಪಿಯ 15-20 ಶಾಸಕರು ಗೆಲ್ಲುತ್ತಾರೆ. ಅವರಲ್ಲೇ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಆದ್ರೆ ಮುಂದಿನ ಬಾರಿ ಉತ್ತರ ಕರ್ನಾಟಕದವರೇ ಸಿಎಂ ಆಗ್ತಾರೆ. ಪ್ರಧಾನಿ ಮೋದಿ ಈ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದ 125 ಕೋಟಿ ಅನುದಾನ ಕಡಿತ ಮಾಡಿದ ಹಿನ್ನಲೆ ಸಿಎಂ ಬಿಎಸ್ ವೈ ಮತ್ತು ನನ್ನ ಮಧ್ಯೆ ಜಗಳ ಶುರುವಾಗಿದೆ. ಇನ್ನೇನು ಸಿಎಂ ಬಿಎಸ್ ವೈ ಬಹಳ ದಿನ ಅಧಿಕಾರದಲ್ಲಿ ಇರಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.