Publish Date: Fri, 13 Nov 2020 (11:19 IST)
Updated Date: Fri, 13 Nov 2020 (11:21 IST)
ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್ ಗೃಹ ಸಚಿವ ಅಮಿತ್ ಶಾ ಅವರ ಖಾತೆಯ ಪ್ರೊಫೈಲ್ ಫೋಟೋವನ್ನೇ ಕಿತ್ತು ಹಾಕಿದ ಘಟನೆ ನಡೆದಿದೆ.
ಕಾಪಿ ರೈಟ್ ವಿವಾದದ ಹಿನ್ನಲೆಯಲ್ಲಿ ಟ್ವಿಟರ್ ಕೆಲವು ಕ್ಷಣಗಳ ಕಾಲ ಅಮಿತ್ ಶಾ ಪ್ರೊಫೈಲ್ ಫೋಟೋವನ್ನು ತೆಗೆದುಹಾಕಿತ್ತು. ಆದರೆ ಬಳಿಕ ಕೆಲವೇ ಕ್ಷಣಗಳಲ್ಲಿ ಪುನಸ್ಥಾಪಿಸಿತು. ಅಮಿತ್ ಶಾ ಪ್ರೊಫೈಲ್ ಫೋಟೋ ಮಾಯವಾಗುತ್ತಿದ್ದಂತೇ ಹಲವರು ಕಾಮೆಂಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದರು.