Publish Date: Fri, 13 Nov 2020 (09:44 IST)
Updated Date: Fri, 13 Nov 2020 (09:47 IST)
ನವದೆಹಲಿ: ಕೇಂದ್ರ ಸರ್ಕಾರ ಪಬ್ ಜಿ ಗೇಮ್ ನ್ನು ನಿಷೇಧಿಸಿದಾಗ ಅದೆಷ್ಟೋ ಮಂದಿ ಒಳಗೊಳಗೇ ಬೇಸರಪಟ್ಟುಕೊಂಡಿರಬಹುದು. ಆದರೆ ಈಗ ಪಬ್ ಜಿ ಪ್ರಿಯರು ಖುಷಿಪಡುವ ಸುದ್ದಿಯೊಂದು ಬಂದಿದೆ.
ಭದ್ರತಾ ಕಾರಣದಿಂದಾಗಿ ಕೇಂದ್ರ ಪಬ್ ಜಿ ಗೇಮ್ ಗೆ ನಿಷೇಧ ಹೇರಿತ್ತು. ಆದರೆ ಈಗ ಸಂಸ್ಥೆ ಭಾರತೀಯ ಬಳಕೆದಾರರಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಗೇಮ್ ನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ. ಇದರಿಂದ ಭಾರತೀಯ ನಾಗರಿಕರ ಭದ್ರತೆಗೆ ತೊಂದರೆಯಾಗಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.