Select Your Language

Notifications

webdunia
webdunia
webdunia
webdunia

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಪರಿಚಯನಾದವ ಎಸಗಿದ ಇಂತಹ ನೀಚ ಕೃತ್ಯ

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಪರಿಚಯನಾದವ ಎಸಗಿದ ಇಂತಹ ನೀಚ ಕೃತ್ಯ
ಅಹಮದಾಬಾದ್ , ಮಂಗಳವಾರ, 22 ಸೆಪ್ಟಂಬರ್ 2020 (09:55 IST)
ಅಹಮದಾಬಾದ್ : ಮಹಿಳೆಯೊಬ್ಬಳು ಅಸಭ್ಯವಾಗಿ ಮಾತನಾಡಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ನಕಲಿ ಪ್ರೊಪೈಲ್ ರಚಿಸಿ ಆಕೆಯ ಬಗ್ಗೆ ಅವಹೇಳನಕಾರಿ ಮಾಹಿತಿ ಮತ್ತು ಮೊಬೈಲ್ ಸಂಖ್ಯೆ ಪೋಸ್ಟ್ ಮಾಡಿದ್ದಾನೆ.

ಮಹಿಳೆಗೆ ಈ ವ್ಯಕ್ತಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಪರಿಚಯವಾಗಿದ್ದಾನೆ, ಇಬ್ಬರು ಮದುವೆಯಾಗುವ ಉದ್ದೇಶದಿಂದ ತಮ್ಮ ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆದರೆ ಕೊನೆಗೆ ಆ ವ್ಯಕ್ತಿಗೆ ಮೊದಲೇ ಮದುವೆ ನಿಶ್ಚಯವಾಗಿದೆ ಎಂದು ತಿಳಿದ ಮಹಿಳೆ ಬಾಯಿಗೆ ಬಂದಂತೆ ಆತನಿಗೆ ಬೈದಿದ್ದಾಳೆ.

ಇದರಿಂದ ಕೋಪಗೊಂಡ ಆತ ಫೇಸ್ ಬುಕ್ ನಲ್ಲಿ ನಕಲಿ ಪ್ರೋಪೈಲ್ ರಚಿಸಿ ಆಕೆಯನ್ನು ವೇಶ್ಯೆ ಎಂದು ಹೇಳಿ ಮೊಬೈಲ್ ಸಂಖ್ಯೆ, ವಿಳಾಸವನ್ನು ಹಾಕಿದ್ದಾನೆ. ಇದರಿಂದ ಆಕೆಗೆ ಹಲವರು ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಆದಕಾರಣ ಮಹಿಳೆ ಸೈಬರ್ ಕ್ರೈಂಗೆ ದೂರು ನೀಡಿದ್ದು, ತಕ್ಷಣ ಸೈಬರ್ ಕ್ರೈಂನವರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆರೆಮನೆಯಾತ ಮಗಳ ಜತೆ ಸಂಬಂಧ ಬೆಳೆಸಿದ್ದು ತಿಳಿದು ಮಗಳ ಜತೆ ಮಲಗಿದ ತಂದೆ