Publish Date: Sat, 19 Sep 2020 (10:09 IST)
Updated Date: Sat, 19 Sep 2020 (18:00 IST)
ನವದೆಹಲಿ : ಸೋದರ ಮಾವನ ಮುಂದೆಯೇ 17 ವರ್ಷದ ಹುಡಗಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನವದೆಹಲಿಯ ಹರ್ಶ್ ವಿಹಾರ್ ಪ್ರದೇಶದ ಕಟ್ಟಡವೊಂದರಲ್ಲಿ ನಡೆದಿದೆ.
ಹುಡುಗಿ ಹಾಗೂ ಆಕೆಯ ಸೋದರ ಮಾವ ರಾತ್ರಿ ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ ಬರುತ್ತಿರುವಾಗ ದಾರಿಯಲ್ಲಿ ಅವರನ್ನು ತಡೆದ ಮೂವರು ಹುಡುಗಿಗೆ ಕಿರುಕುಳ ನೀಡಿದ್ದಾರೆ. ಇದನ್ನು ಮಾವ ವಿರೋಧಿಸಿದಾಗ ಅವರಿಬ್ಬರಿಗೆ ಚಾಕು ತೋರಿಸಿ ಅವರನ್ನು ಕಟ್ಟಡದ ಕಡೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾರೆ. ಮಾವ ಇದನ್ನು ತಡೆಯಲು ಬಂದಾಗ ಆತನ ಮೇಲೂ ಹಲ್ಲೆ ಮಾಡಿ ಅವರ ಪರ್ಸ್ ಕಿತ್ತುಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಶರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.