ನವದೆಹಲಿ : ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವಂತೆ ಸಿಎಂ ಬಿಎಸ್ ವೈಗೆ ಮನವಿ ಮಾಡಿದ್ದೇನೆ. ಹಿಂದೆ ಸಚಿವ ಸ್ಥಾನ ಕೊಟ್ಟಾಗ ಸೂಕ್ತವಾಗಿ ನಿಭಾಯಿಸಿದ್ದೇನೆ. ಪ್ರಹ್ಲಾದ್ ಜೋಶಿ, ಬಿಎಲ್ ಸಂತೋಷ್, ಡಿವಿ ಸದಾನಂದ ಗೌಡರನ್ನು ಭೇಟಿ ಮಾಡಿ ಪ್ರಾದೇಶಿಕ ಅಸಮತೋಲನ ಸರಿಪಡಿಸುವಂತೆ ಮನವಿ ಮಾಡಿದ್ದೇನೆ.
ಸಿಎಂ ಬಿಎಸ್ ವೈ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಎಸ್ ವೈ ಕೈಬಿಡುವ ವಿಚಾರ ಕೇವಲ ಊಹಾಪೋಹ, ಎಲ್ಲಾ ಸಮಸ್ಯೆಗಳನ್ನು ಸಿಎಂ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.