Publish Date: Wed, 30 Sep 2020 (10:02 IST)
Updated Date: Wed, 30 Sep 2020 (10:09 IST)
ಲಕ್ನೋ : ಮನೆಯ ಮುಂದೆ ಉಗುಳಬೇಡ ಎಂದಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಮನೆಯ ಮಾಲೀಕ ಸಾಕಿದ ಪಾರಿವಾಳನ್ನು ಕೊಂದ ಘಟನೆ ಉತ್ತರ ಪ್ರದೇಶದ ಭಾಗಪತ್ ನಲ್ಲಿ ನಡೆದಿದೆ.
ರಾಹುಲ್ ಸಿಂಗ ಇಂತಹ ಕೃತ್ಯ ಎಸಗಿದ ಯುವಕ. ಈತ ಧರಂಪಾಲ್ ಎಂಬುವವರ ಮನೆಯ ಮುಂದೆ ಯಾವಾಗಲೂ ಎಂಜಲು ಉಗಿಯುತ್ತಿದ್ದ. ಕೊರೊನಾ ಭೀತಿ ಹಿನ್ನಲೆಯಲ್ಲಿ ಧರಂಪಾಲ್ ಉಗಿಯಬೇಡ ಎಂದು ಗದರಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕ ಧರಂಪಾಲ್ ಸಾಕಿದ 11 ಪಾರಿವಾಳಗಳನ್ನು ಕಲ್ಲಿನಿಂದ ಜಜ್ಜಿ ಕೊಂದು ಹಾಕಿದ್ದಾನೆ.
ಈ ಬಗ್ಗೆ ಧರಂಪಾಲ್ ಆರೋಪಿ ವಿರುದ್ಧ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಆರೋಪಿ ಪರಾರಿಯಾಗಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
pavithra
Publish Date: Wed, 30 Sep 2020 (10:02 IST)
Updated Date: Wed, 30 Sep 2020 (10:09 IST)