Select Your Language

Notifications

webdunia
webdunia
webdunia
webdunia

‘ಬಲಿದಾನ ದಿವಸ’ ಆಚರಿಸಲು ಮನೆಗೆ ಬಂದ ಹುಡುಗಿಗೆ ಮೂವರು ಅಪ್ರಾಪ್ತರು ಮಾಡಿದ್ದೇನು?

ರಾಯ್ ಪುರ
ರಾಯ್ ಪುರ , ಶುಕ್ರವಾರ, 25 ಸೆಪ್ಟಂಬರ್ 2020 (09:32 IST)
ರಾಯ್ ಪುರ : ಬಲಿದಾಸ ದಿವಸವನ್ನು ಆಚರಿಸಲು ಮನೆಗೆ ಬಂದ ಬುಡಕಟ್ಟು ಜನಾಂಗದ ಹುಡುಗಿಯ ಮೇಲೆ ಮೂವರು ಅಪ್ರಾಪ್ತರು ಸೇರಿ ಮಾನಭಂಗ ಎಸಗಿದ ಘಟನೆ ಚತ್ತೀಸ್ ಗಢ್ ನ ರಾಜನಂದಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

1857ರಲ್ಲಿ  ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಬಿಟ್ಟ ರಾಜ ರಘುನಾಥ್ ಷಾ ಮತ್ತು ಅವರ ಪುತ್ರ ಶಂಕರ್ ಷಾ ಅವರ ನೆನಪಿಗಾಗಿ ಬುಡಕಟ್ಟು ಗ್ರಾಮವು ‘ಬಲಿದಾನ ದಿವಸ’ ಅನ್ನು ಆಚರಿಸುತ್ತಿದೆ. ಅದರಂತೆ ಹಳ್ಳಿಯ ನಿವಾಸಿಗಳನ್ನು ಭೇಟಿಯಾಗಲು ಮನೆಮನೆಗೆ ಹೋಗುತ್ತಿದ್ದರು. ಈ ಹಿನ್ನಲೆಯಲ್ಲಿ ಹುಡುಗಿ ಕೂಡ ಈ ಆಚರಣೆಯಲ್ಲಿ ಭಾಗಿಯಾಗಿ ಮೂವರು ಅಪ್ರಾಪ್ತರ ಮನೆಗೆ ಹೋದಾಗ ಅವರು ಆಕೆಯ ಮೇಲೆ ರೇಪ್ ಮಾಡಿದ್ದಾರೆ.

ಬಳಿಕ ಹುಡುಗಿ ಈ ಬಗ್ಗೆ ತನ್ನ ತಂದೆಗೆ ತಿಳಿಸಿದ್ದರು ಪೊಲೀಸರಿಗೆ ದೂರು ನೀಡದ ತಂದೆ ಪಂಚಾಯತ್ ಮಟ್ಟದಲ್ಲಿ ಅವರಿಗೆ ಶಿಕ್ಷೆ ವಿಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ : ಸಚಿವರು ಬಿಚ್ಚಿಟ್ಟ ಸತ್ಯ