Publish Date: Mon, 08 Feb 2021 (09:07 IST)
Updated Date: Mon, 08 Feb 2021 (09:31 IST)
ಚೆನ್ನೈ : ವ್ಯಕ್ತಿಯೊಬ್ಬ ತಾನು ಪ್ರೀತಿಸಿದ ಯುವತಿ ಮತ್ತು ಅವಳ ತಾಯಿಯನ್ನು ಸುಟ್ಟುಹಾಕಿ ತಾನು ಬೆಂಕಿ ಹಚ್ಚಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.
ಯುವಕ ಮತ್ತು ಯುವತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯುವತಿಯ ತಾಯಿ ಆಕೆಗೆ ಬೇರೆ ಮದುವೆ ನಿಶ್ಚಯ ಮಾಡಿದ್ದರು. ಹಾಗಾಗಿ ಯುವತಿ ತಾನು ಪ್ರೀತಿಸಿದವನನ್ನು ನಿರಾಕರಿಸಲು ಶುರು ಮಾಡಿದ್ದಳು. ಇದರಿಂದ ಬೇಸರಗೊಂಡ ಯುವಕ ಯುವತಿ ಮತ್ತು ಅವಳ ತಾಯಿಯ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ. ಬಳಿಕ ತನಗೂ ಕೂಡ ಬೆಂಕಿ ಹಚ್ಚಿಕೊಂಡಿದ್ದಾನೆ.