Select Your Language

Notifications

webdunia
webdunia
webdunia
webdunia

Exclusive:ತಾಜ್ ಮಹಲ್ ಮುಂದೆ ‘ಗಟ್ಟಿಮೇಳ’ದ ರೌಡಿ ಬೇಬಿ ಅಮೂಲ್ಯಗೆ ಮದುವೆ ಪ್ರಪೋಸಲ್

Exclusive:ತಾಜ್ ಮಹಲ್ ಮುಂದೆ ‘ಗಟ್ಟಿಮೇಳ’ದ ರೌಡಿ ಬೇಬಿ ಅಮೂಲ್ಯಗೆ ಮದುವೆ ಪ್ರಪೋಸಲ್
ಬೆಂಗಳೂರು , ಶನಿವಾರ, 6 ಫೆಬ್ರವರಿ 2021 (14:31 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಧಾರವಾಹಿಗಳು ಯಾವ ಸಿನಿಮಾಗೂ ಕಡಿಮೆಯಿಲ್ಲದಂತೇ ಚಿತ್ರೀಕರಣಗೊಳ್ಳುತ್ತಿದೆ. ವಿಶಿಷ್ಟ ಲೊಕೇಷನ್ ಗಳಲ್ಲಿ ಚಿತ್ರೀಕರಣ ಮಾಡುವ ಮೂಲಕ ವೀಕ್ಷಕರಿಗೆ ಥ್ರಿಲ್ ಕೊಡುತ್ತಿದೆ. ಇದೀಗ ಗಟ್ಟಿಮೇಳ ಧಾರವಾಹಿ ತಂಡ ಅದೇ ಪ್ರಯತ್ನ ಮಾಡಿದೆ.


ಕಿರುತೆರೆಯಲ್ಲಿ ಟಿಆರ್ ಪಿಯಲ್ಲಿ ಸದಾ ಮುಂದಿರುವ ಗಟ್ಟಿಮೇಳ ಧಾರವಾಹಿ ತಂಡ ಈಗ ವಿಶ್ವ ವಿಸ್ಮಯ, ಪ್ರೇಮಸೌಧ ತಾಜ್ ಮಹಲ್ ಎದುರುಗಡೆ ಚಿತ್ರೀಕರಣ ಮಾಡಿದೆ. ಪ್ರೇಮಸೌಧದ ಮುಂದೆ ನಾಯಕ ವೇದಾಂತ್ ವಸಿಷ್ಠ ನಾಯಕಿ ರೌಡಿ ಬೇಬಿ ಅಮೂಲ್ಯಗೆ ಮದುವೆ ಪ್ರಪೋಸಲ್ ಮಾಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ದೃಶ್ಯದಲ್ಲಿ ಕೇವಲ ನಾಯಕ-ನಾಯಕಿ ಮಾತ್ರವಲ್ಲದೆ, ನಾಯಕಿಯ ತಂದೆ ಮಂಜುನಾಥ್, ಪರಿಮಳಾ, ನಾಯಕನ ಸಹೋದರ ವಿಕ್ಕಿ ಕೂಡಾ ಭಾಗಿಯಾಗಿದ್ದಾರೆ.
webdunia


ಸದ್ಯಕ್ಕೆ ಟಿ ಆರ್ ಪಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗಟ್ಟಿಮೇಳ ಧಾರವಾಹಿ ಮತ್ತೆ ನಂ.1 ಸ್ಥಾನಕ್ಕೇರಲು ಈ ಸೀಕ್ವೆನ್ಸ್ ಸಹಾಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಧಾರವಾಹಿ ತಂಡವಿದೆ. ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಇಂದು ಚಿತ್ರೀಕರಣ ಅಂತ್ಯವಾಗಲಿದೆ. ಮುಂದಿನ ವಾರ ತೆರೆ ಮೇಲೆ ತಾಜ್ ಮಹಲ್ ಮುಂದೆ ಮದುವೆ ಪ್ರಪೋಸಲ್ ದೃಶ್ಯ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಿನಿಮಾಗಳ ರಿಲೀಸ್ ಗೆ ಯಾವುದೇ ಅಡ್ಡಿ ಇಲ್ಲ- ತೆಲುಗು ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸ್ಪಷ್ಟನೆ