Publish Date: Mon, 29 Mar 2021 (07:28 IST)
Updated Date: Mon, 29 Mar 2021 (07:30 IST)
ಜೈಪುರ : ಅಪ್ರಾಪ್ತ ಹುಡುಗಿಯನ್ನು ಮೂರು ಮಕ್ಕಳ ತಂದೆಯೊಬ್ಬ ಅಪಹರಿಸಿ ಮಾನಭಂಗ ಎಸಗಿದ ಘಟನೆ ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಬಾಲಕಿಯನ್ನು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದಾಗ ಅಪಹರಿಸಿ ಮಾನಭಂಗ ಎಸಗಿ ಬಳಿಕ ಕತ್ತು ಹಿಸುಕಿ ಕೊಂದು ಬಾವಿಗೆ ಎಸೆದಿದ್ದಾನೆ. ಇತ್ತ ಬಾಲಕಿ ಮನೆಯವರು ಬಾಲಕಿ ಕಾಣೆಯಾದ ಕುರಿತು ದೂರು ದಾಖಲಿಸಿದ್ದಾರೆ.
ಆದರೆ ಸ್ಥಳೀಯರು ಬಾವಿಯಲ್ಲಿ ಬಾಲಕಿಯ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ವಶಪಡಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ. ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.