Select Your Language

Notifications

webdunia
webdunia
webdunia
webdunia

ಹನಿಮೂನ್ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್: ಸೋನಂ ಎರಡನೇ ಮದುವೆ

Indore murder

Krishnaveni K

ಇಂಧೋರ್ , ಶುಕ್ರವಾರ, 4 ಜುಲೈ 2025 (12:04 IST)
ಇಂಧೋರ್: ಹನಿಮೂನ್ ಗೆ ಮೇಘಾಲಯಕ್ಕೆ ಹೋಗಿದ್ದಾಗ ಗಂಡ ರಾಜ ರಘುವಂಶಿಯನ್ನು ಸೋನಂ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಮರ್ಡರ್ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಸೋನಂ ಎರಡನೇ ಮದುವೆ ಬಗ್ಗೆ ವಿಚಾರವೊಂದು ಹೊರಬಿದ್ದಿದೆ.

ಮೇ 23 ರಂದು ರಾಜ ರಘುವಂಶಿ ಮೇಘಾಲಯದಲ್ಲಿ ನಾಪತ್ತೆಯಾಗಿದ್ದ. ಅದಾದ 10 ದಿನದ ಬಳಿಕ ಆತನ ಮೃತದೇಹ ಮೇಘಾಲಯದ ಕಮರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಸೋನಂ ನಾಪತ್ತೆಯಾಗಿದ್ದಳು. ಮೃತದೇಹ ಸಿಕ್ಕ ಬೆನ್ನಲ್ಲೇ  ರಾಜ ರಘುವಂಶಿಯ ಹಂತಕರ ಪೈಕಿ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಸ್ವತಃ ಪತ್ನಿ ಸೋನಂಳೇ ಈ ಕೃತ್ಯವೆಸಗಿದ್ದು ಪತ್ತೆಯಾಗಿತ್ತು. ಬಳಿಕ ಸೋನಂ ಹಾಗೂ ಆಕೆಯ ಪ್ರಿಯಕರ ರಾಜ್ ಕುಶ್ವಾಹನನ್ನೂ ಪೊಲೀಸರು ಬಂಧಿಸಿದ್ದರು.

ಇದೀಗ ರಾಜ ರಘುವಂಶಿಯ ಸಹೋದರ ಸೋನಂ ಬಗ್ಗೆ ದೊಡ್ಡ ಆರೋಪ ಮಾಡಿದ್ದಾನೆ. ಸೋನಂಳಿಂದ ಎರಡು ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದು ಮದುವೆ ಸಮಯದಲ್ಲಿ ರಾಜ ರಘುವಂಶಿ ಕಡೆಯಿಂದ ಸಿಕ್ಕಿದ್ದು. ಇನ್ನೊಂದು ಮಾಂಗಲ್ಯ ಸರ ಕೊಲೆ ನಡೆದ ಬಳಿಕ ಆಕೆ ಪ್ರಿಯಕರನ ಜೊತೆ ಎರಡನೇ ಮದುವೆಯಾಗಿರಬಹುದು. ಈ ತಾಳಿಸರ ಅದೇ ಇರಬೇಕು ಎಂದು ವಿಪಿನ್ ಆರೋಪಿಸಿದ್ದಾರೆ. ಇದೀಗ ವಿಪಿನ್ ಆರೋಪ ನಿಜವೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut price: ಅಡಿಕೆ, ಕೊಬ್ಬರಿ ಬೆಲೆ ಇಳಿಕೆ, ಕಾಳುಮೆಣಸು ಏರಿಕೆ