Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಭಾರೀ ಏರಿಕೆ!

ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಭಾರೀ ಏರಿಕೆ!
ನವದೆಹಲಿ , ಸೋಮವಾರ, 16 ಆಗಸ್ಟ್ 2021 (13:27 IST)
ನವದೆಹಲಿ(ಆ.16): ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಮರಣ ಪ್ರಮಾಣದ ಇಳಿಕೆಯಿಂದಾಗಿ 1961ರ ಬಳಿಕ ದೇಶದಲ್ಲಿನ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಏರಿಕೆ ಆಗುತ್ತಿದೆ. ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಸಂಖ್ಯೆ 2021ರಲ್ಲಿ 13.8 ಕೋಟಿಗೆ ತಲುಪಿದೆ ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿ(ಎನ್ಎಸ್ಒ) ನಡೆಸಿದ ಅಧ್ಯಯನವೊಂದು ತಿಳಿಸಿದೆ.

ಪ್ರಸ್ತುತ 13.8 ಕೋಟಿ ಜನ ಹಿರಿಯ ನಾಗರಿಕರಿದ್ದು, ಇದರಲ್ಲಿ 6.7 ಕೋಟಿ ಜನ ಪುರುಷರಾಗಿದ್ದರೆ, 7.1 ಕೋಟಿ ಮಹಿಳೆಯರಾಗಿದ್ದಾರೆ. 2011ರಿಂದ 2021ರ ವೇಳೆಗೆ ಒಟ್ಟು ಜನಸಂಖ್ಯೆ ಶೇ.12.4ರಷ್ಟುಏರಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಹಿರಿಯ ನಾಗರಿಕರ ಪ್ರಮಾಣ 35.8ರಷ್ಟು ಹೆಚ್ಚಳವಾಗಿದೆ. ಅದೇ ರೀತಿ 2021ರಿಂದ 2031ರ ವೇಳೆಗೆ ಜನಸಂಖ್ಯೆ ಪ್ರಮಾಣ ಶೇ.8.4ರಷ್ಟುಏರಿಕೆಯಾಗಲಿದ್ದು, ಹಿರಿಯ ನಾಗರಿಕರ ಪ್ರಮಾಣ ಶೇ.40.5ರಷ್ಟುಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ತಿಳಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ 1991ರ ಜನಗಣತಿ ಪ್ರಕಾರ ಪುರುಷರಿಗಿಂತ ಹಿರಿಯ ಮಹಿಳೆಯರ ಸಂಖ್ಯೆಯೇ ಹೆಚ್ಚು ಇತ್ತು. ಆದರೆ ಕಳೆದೆರಡು ದಶಕಗಳಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ 2031ರ ಜನಗಣತಿ ವೇಳೆಗೆ ಪುರುಷರ ಸಂಖ್ಯೆಯನ್ನು ಮಹಿಳೆಯರು ಮೀರಿಸಲಿದ್ದಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನ‌ ಬೆಂಗ್ರೆ ಪ್ರದೇಶದಲ್ಲಿ ಸಾಗರಮಾಲಾ ಯೋಜನೆಯಡಿ ಕೋಸ್ಟಲ್ ಬರ್ತ್ ಕಾಮಗಾರಿ