Publish Date: Sun, 27 Oct 2019 (09:06 IST)
Updated Date: Sun, 27 Oct 2019 (09:07 IST)
ನವದೆಹಲಿ: ಹರ್ಯಾಣದ ಮುಖ್ಯಮಂತ್ರಿಯಾಗಿ ಮನೋಹರ ಲಾಲ್ ಖಟ್ಟರ್ ಮತ್ತೊಮ್ಮೆ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಮಧ್ಯಾಹ್ನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
40 ಸೀಟು ಗೆದ್ದಿದ್ದ ಬಿಜೆಪಿ ಬಹುಮತಕ್ಕೆ 6 ಸ್ಥಾನಗಳ ಕೊರತೆ ಎದುರಿಸುತ್ತು. ಹೀಗಾಗಿ ಜೆಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತಿದೆ. ಸತತ ಮತ್ತೊಂದು ಅವಧಿಗೆ ಖಟ್ಟರ್ ಸಿಎಂ ಆಗುತ್ತಿದ್ದಾರೆ.
ಖಟ್ಟರ್ ಜತೆಗೆ ಜೆಜೆಪಿಯ ದುಷ್ಯಂತ್ ಚೌಟಾಲ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈಗಾಗಲೇ ಇಬ್ಬರೂ ನಾಯಕರು ರಾಜಭವನಕ್ಕೆ ತೆರಳಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ.