Publish Date: Sat, 26 Oct 2019 (19:20 IST)
Updated Date: Sat, 26 Oct 2019 (19:21 IST)
ಮುಂಬರುವ ಉಪಚುನಾವಣೆಗಾಗಿ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಸಿದ್ಧತೆಯನ್ನು ಚುರುಕುಗೊಳಿಸಿದೆ.
ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತಿದೆ. ಹೀಗಂತ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಈಗಾಗಲೇ ಬೆಂಗಳೂರಿನಲ್ಲಿ ಅ. 23 ರಂದು ಉತ್ತರ ಕರ್ನಾಟಕದ ಎಂಟು ವಿಧಾನಸಭಾ ಕ್ಷೇತ್ರಗಳ ಸಭೆಯನ್ನು ನಡೆಸಲಾಗಿದೆ. ಅದೇ ರೀತಿ ಅಥಣಿ, ಕಾಗವಾಡ, ಗೋಕಾಕ್ , ಹಿರೇಕೆರೂರ, ರಾಣೆಬೆನ್ನೂರ, ಯಲ್ಲಾಪುರ, ವಿಜಯನಗರ (ಹೊಸಪೇಟೆ) ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ಕ್ಷೇತ್ರಗಳ ಕೋರ ಕಮಿಟಿ ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳ ಪ್ರಮುಖರ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಮುಂಬರುವ ಉಪಚುನಾವಣೆ, ಜೂನ್ ನಲ್ಲಿ ಬರುವ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆ ಕುರಿತು ಸಿದ್ದತಾ ಸಭೆ ಕರೆಯಲಾಗಿದೆ. ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದ್ರು.