Publish Date: Fri, 25 Oct 2019 (17:08 IST)
Updated Date: Fri, 25 Oct 2019 (17:10 IST)
ಉಪ ಚುನಾವಣೆಯ ಕಾವು ಶುರುವಾಗಿರುವಾಗಲೇ ಮಂಡ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಹವಾ ಜೋರಾಗುತ್ತಿದೆ.
ಮಂಡ್ಯದ ಶೀಳನೆರೆ ಗ್ರಾಮದಲ್ಲಿ ನಡೆದ ಅನರ್ಹ ಶಾಸಕ ನಾರಾಯಣಗೌಡರ ಅಭಿಮಾನಿಗಳ ಸಭೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಮಾಜಿಶಾಸಕ ಮಾರುತಿರಾವ್ ಪವಾರ್ ಭಾಗಿಯಾದ್ರು.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯು ಗೆಲ್ಲುವ ಮೂಲಕ
ಮಂಡ್ಯ ಜಿಲ್ಲೆಯಲ್ಲಿ ಖಾತೆ ತೆರೆಯುವ ವಿಶ್ವಾಸ ವ್ಯಕ್ತಪಡಿಸಿದ್ರು ಪವಾರ್.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ
ಜನ್ಮಭೂಮಿಯ ಅಪೂರ್ವ ಕಾಣಿಕೆಯನ್ನು ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಬುದ್ಧ ಮತದಾರರು ನೀಡುತ್ತಾರೆ ಅಂತ ಭವಿಷ್ಯ ನುಡಿದ್ರು.
ತಾಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆ ಬಿಜೆಪಿ ಪಕ್ಷದ ಅಭ್ಯರ್ಥಿಗೆ ವಿಜಯಮಾಲೆ ತೊಡಿಸಿ ಹರಸಿ, ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.