ಅಹಮ್ಮದಾಬಾದ್: ಪತ್ನಿ ಮೇಲಿನ ಸಿಟ್ಟಿಗೆ ಗುಜರಾತ್ ನಲ್ಲಿ ವ್ಯಕ್ತಿಯೊಬ್ಬ ತನ್ನ 8 ವರ್ಷದ ಬಾಮೈದನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
									
			
			 
 			
 
 			
			                     
							
							
			        							
								
																	ಕೆಲವು ದಿನಗಳ ಹಿಂದೆ ಪತ್ನಿ ಜೊತೆಗೆ ಆರೋಪಿಗೆ ಜಗಳವಾಗಿತ್ತು. ಇದರ ಬೆನ್ನಲ್ಲೇ 8 ವರ್ಷದ ಆಕೆಯ ಸಹೋದರನನ್ನು ಆಟೋ ರಿಕ್ಷಾವೊಂದರಲ್ಲಿ ಕೂರಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದ. ಬಳಿಕ ಕೊಲೆ ಮಾಡಿ ನಾಲೆಯೊಂದರಲ್ಲಿ ಮೃತದೇಹ ಬಿಸಾಕಿದ್ದ.
									
										
								
																	ಆತನ ಕೃತ್ಯವನ್ನು ನೋಡಿದ್ದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.