ರಾಮನಗರ: ವಿಕೃತ ಕಾಮಿ ಗಂಡನ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ನಡೆದಿದೆ.
ಮದುವೆಯಾದ ಒಂದೇ ತಿಂಗಳಿಗೆ ಮಹಿಳೆಗೆ ಗಂಡನ ಕಲ್ಯಾಣ ಗುಣಗಳು ತಿಳಿದುಬಂದಿತ್ತು. ಗಂಡ ತವರಿನಿಂದ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ, ಸಿಗರೇಟಿನಿಂದ ಮೈ ಸುಡುತ್ತಿದ್ದ. ಜೊತೆಗೆ ಆತ ವಿಕೃತ ಕಾಮಿಯಾಗಿದ್ದ. ಸೋಷಿಯಲ್ ಮೀಡಿಯಾ ಮೂಲಕ ಅನೇಕ ಪರಸ್ತ್ರೀಯರೊಂದಿಗೆ ಸೆಕ್ಸ್ ಚ್ಯಾಟ್ ನಡೆಸುತ್ತಿದ್ದ.
ಗಂಡನ ಕಿರುಕುಳಕ್ಕೆ ಅತ್ತೆ-ಮಾವನೂ ಕುಮ್ಮಕ್ಕು ನೀಡುತ್ತಿದ್ದರಂತೆ. ಇದೆಲ್ಲದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ಮಹಿಳೆಯ ಪೋಷಕರು ನೀಡಿದ ದೂರಿನಂತೆ ಗಂಡನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.