Publish Date: Mon, 31 Jan 2022 (11:47 IST)
Updated Date: Mon, 31 Jan 2022 (09:36 IST)
ನವದೆಹಲಿ: ಹೆತ್ತ ತಾಯಿಯನ್ನೇ ಇಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ಮಗ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಣ್ಣ ವ್ಯಾಪಾರ ನಡೆಸುತ್ತಿದ್ದ ಪುತ್ರ ಪತ್ನಿ, ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ. ತಾಯಿ ಮನೆಗೆ ಬಂದಿದ್ದ ಆರೋಪಿ ತನ್ನ ಸಹೋದರಿಗೆ ನಿಶ್ಚಯ ಮಾಡಿದ್ದ ಹುಡುಗ ಸರಿ ಇಲ್ಲ ಎಂದು ಜಗಳವಾಡಿದ್ದ. ಇದೇ ಜಗಳ ತಾರಕಕ್ಕೇರಿ ತಾಯಿಗೆ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದ.
ಬಳಿಕ ಪೊಲೀಸರು ಬಂಧಿಸಬಹುದೆಂಬ ಭೀತಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.