Select Your Language

Notifications

webdunia
webdunia
webdunia
webdunia

ಆರು ಮೊಬೈಲ್ ನೀಡಲು ನಟ ದಿಲೀಪ್ ಗೆ ಹೈಕೋರ್ಟ್ ಆದೇಶ

ಆರು ಮೊಬೈಲ್ ನೀಡಲು ನಟ ದಿಲೀಪ್ ಗೆ ಹೈಕೋರ್ಟ್ ಆದೇಶ
ಕೊಚ್ಚಿ , ಭಾನುವಾರ, 30 ಜನವರಿ 2022 (10:15 IST)
ಕೊಚ್ಚಿ: ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ವಿಚಾರಾಧಿಕಾರಿಗಳಿಗೆ ಬೆದರಿಕೆ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ದಿಲೀಪ್ ಗೆ ಕೇರಳ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.

ಈ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಒದಗಿಸುವ ದಿಲೀಪ್ ರ ಮೊಬೈಲ್ ಫೋನ್ ಗಳನ್ನು ಸೋಮವಾರವೇ ಕೋರ್ಟ್ ಗೆ ಒಪ್ಪಿಸುವಂತೆ ಹೈಕೋರ್ಟ್ ಆದೇಶಿಸಿದೆ.

ದಿಲೀಪ್ ವಿಚಾರಣಾಧಿಕಾರಿಗಳಿಗೆ ಬೆದರಿಕೆ ಹಾಕಿರುವ ಅಡಿಯೋ ರೆಕಾರ್ಡ್ ಆಗಿದೆ ಎನ್ನಲಾದ ಆರು ಮೊಬೈಲ್ ಫೋನ್ ಗಳನ್ನು ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ಈ ಮೊದಲು ದಿಲೀಪ್ ಮೊಬೈಲ್ ನೀಡಲು ನಿರಾಕರಿಸಿದ್ದರು. ಇದೀಗ ಫೋನ್ ಮಾಹಿತಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ನೀಡಿ ಅದರಲ್ಲಿರುವ ಮಾಹಿತಿ ಪಡೆದರೆ ದಿಲೀಪ್ ವಿರುದ್ಧದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಗಲಿದೆ. ಹೀಗಾಗಿ ಹೈಕೋರ್ಟ್ ನ ಈ ಅದೇಶ ಮಹತ್ವ ಪಡೆದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ನಟ ವಿನೋದ್ ರಾಜ್ ಆಕ್ರೋಶ