Select Your Language

Notifications

webdunia
webdunia
webdunia
webdunia

ಸೋಷಿಯಲ್ ಮೀಡಿಯಾದಲ್ಲಿ ಪತ್ನಿಗೆ ತಲಾಖ್ ನೀಡಿದ್ದಕ್ಕೆ ಪತಿ ವಿರುದ್ಧ ಕೇಸ್

ಸೋಷಿಯಲ್ ಮೀಡಿಯಾದಲ್ಲಿ ಪತ್ನಿಗೆ ತಲಾಖ್ ನೀಡಿದ್ದಕ್ಕೆ ಪತಿ ವಿರುದ್ಧ ಕೇಸ್
ಅಹಮ್ಮದಾಬಾದ್ , ಶನಿವಾರ, 29 ಜನವರಿ 2022 (11:06 IST)
ಅಹಮ್ಮದಾಬಾದ್: ಸೋಷಿಯಲ್ ಮೀಡಿಯಾದಲ್ಲಿ ತ್ರಿವಳಿ ತಲಾಖ್ ನೀಡಿದ್ದಕ್ಕೆ ಪತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

28 ವರ್ಷದ ವ್ಯಕ್ತಿ ಇನ್ ಸ್ಟಾಗ್ರಾಂ ಮೂಲಕ ಪತ್ನಿಗೆ ತಲಾಖ್ ನೀಡಿದ್ದ. ಈ ಸಂಬಂಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪತಿ-ಪತ್ನಿ ನಡುವೆ ದಾಂಪತ್ಯ ಕಲಹ ನಡೆಯುತ್ತಿತ್ತು. ಈ ನಡುವೆ ಪತಿ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಹೀಗಾಗಿ ಪತ್ನಿ ತವರು ಮನೆಯಲ್ಲಿದ್ದಳು. ಇದೇ ವೇಳೆ ಪತಿ ತಲಾಖ್ ನೀಡಿದ್ದ. ಹೀಗಾಗಿ ಪತ್ನಿ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್‌ಟೆಲ್‌ ಗೆ ಎಷ್ಟು ಕೋಟಿ ಹೂಡಿಕೆ ಮಾಡಿದೆ ಗೂಗಲ್?